ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಬಿಜೆಪಿ ನಾಯಕನ ಬಂಧನ

ಅಸ್ಸಾಂ ಪೊಲೀಸ್ ನ ಸಬ್ ಇನ್ಸ್ಪೆಕ್ಟರ್ (ನಿಶಸ್ತ್ರ ವಿಭಾಗ) ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿರುವ ಆರೋಪದಲ್ಲಿ ಅಸ್ಸಾಮ್ ನ ಬಿಜೆಪಿ ನಾಯಕನೋರ್ವನನ್ನು ಬಂಧಿಸಲಾಗಿದೆ.

ನಿನ್ನೆ ರಾತ್ರಿ ಹೊಸದಾಗಿ ಸ್ಥಾಪಿಸಲಾದ ಬಜಾಲಿ ಜಿಲ್ಲೆಯ ಪತರ್ಕುಚಿ ಪ್ರದೇಶದ ಆಡಳಿತ ಪಕ್ಷದ ನಾಯಕ ದಿಬಾನ್ ದೇಕಾರನ್ನು ಹಿರಿಯ ಅಧಿಕಾರಿಗಳ ನೇತೃತ್ವದ ಅಸ್ಸಾಂ ಪೊಲೀಸ್ ನ ತಂಡವು ಬಂಧಿಸಿದೆ.

- Advertisement -

ಅಸ್ಸಾಂನ ರಾಜಧಾನಿ ನಗರದ ವಿಶೇಷ ದಳದ ಕಚೇರಿ ಆವರಣದಿಂದ ದಿಬಾನ್ ದೇಕಾರನ್ನು ಬಂಧಿಸಲಾಗಿದೆ ಎಂದು ವಿಶೇಷ ದಳದ ಐಜಿಪಿ ಹಿರೇನ್ ನಾಥ್ ತಿಳಿಸಿದ್ದಾರೆ.

ದಿಬಾನ್ ದೇಕಾ ಬಿಜೆಪಿಯ ಕೃಷ್ಣ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. 2011ರ ವಿಧಾನಸಭಾ ಚುನಾವಣೆಯಲ್ಲಿ ಅವರು ನಲ್ಬರಿ ಜಿಲ್ಲೆಯ ಬೊರ್ಖೆತ್ರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದರು.

ಅಸ್ಸಾಂ ಬಿಜೆಪಿಯು ಗುರುವಾರದಂದು ದಿಬಾನ್ ದೇಖಾರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದೆ.

- Advertisement -