ಪ್ರತಿಭಟನಾನಿರತ ರೈತರ ಪರವಾಗಿ ಅಮೆರಿಕದಲ್ಲಿ ಬೀದಿಗಿಳಿದ ಸಿಖ್ ಸಮುದಾಯ

Prasthutha|

ನ್ಯೂಯಾರ್ಕ್: ನೂತನ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟವು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಈ ಮಧ್ಯೆ ರೈತರಿಗೆ ಬೆಂಬಲ ಸೂಚಿಸಿ ಅಮೆರಿಕದಲ್ಲಿರುವ ಭಾರತೀಯ ಮೂಲದ ಸಿಖ್ ಸಮುದಾಯದವರು ಅಮೆರಿಕದಾದ್ಯಂತ ಹಲವಾರು ನಗರಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.

ವಿವಾದಾತ್ಮಕ ಕೃಷಿ ಮಸೂದೆಗಳನ್ನು ರದ್ದುಪಡಿಸುವಂತೆ ಅಮೆರಿಕದ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಸುಮಾರು 500 ಸಿಖ್ ಅಮೆರಿಕನ್ನರು ಭಾಗವಹಿಸಿದ್ದರು.

- Advertisement -

ಚಿಕಾಗೋ ಮತ್ತು ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಎದರು ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

- Advertisement -