ಪೌರತ್ವ ನಿರಾಕರಣೆ: ಬಾಕಿಯುಳಿದ ಪ್ರಶ್ನೆಗಳು

0
61

♦ ಅಡ್ವೋಕೇಟ್ ಮೊಹಮ್ಮದ್ ಯೂಸುಫ್ , ಮಧುರೈ

 

 

ಪೌರತ್ವ ಪಟ್ಟಿಯಿಂದ ಹೊರತಾದವರನ್ನು ಏನು ಮಾಡುವಿರಿ ಎಂಬ ಪ್ರಶ್ನೆಗೆ  ಗೃಹಮಂತ್ರಿಗಾಗಲೀ, ಎನ್‌ಆರ್‌ಸಿ ಸಂಯೋಜಕನಿಗಾಗಲೀ ಯಾವುದೇ ಕಲ್ಪನೆ ಇಲ್ಲ ಎಂಬ ವಿಚಾರವನ್ನು ಎನ್‌ಸಿಎಚ್‌ಆರ್‌ಒ ಚೇಯರ್ ಪರ್ಸನ್ ಎ.ಮಾರ್ಕ್ಸ್ ವ್ಯಕ್ತಪಡಿಸುತ್ತಾರೆ.

ಅಸ್ಸಾಂ ರಾಷ್ಟ್ರೀಯ ಪೌರತ್ವ ದಾಖಲೆಯ ಎನ್‌ಆರ್‌ಸಿ ಅಂತಿಮ ಪಟ್ಟಿ 2019, ಆಗಸ್ಟ್ 31ಕ್ಕೆ ಬಿಡುಗಡೆಗೊಳಿಸಲಾಯಿತು. ಪಟ್ಟಿಯಿಂದ ಹೊರಗುಳಿದವರು ಇನ್ನು ಎನ್‌ಆರ್‌ಸಿ ಸೇವಾ ಕೇಂದ್ರಗಳಲ್ಲಿ (ಎನ್‌ಎಸ್‌ಕೆ) ಪೌರತ್ವ ತಿರಸ್ಕರಿಸಲ್ಪಟ್ಟವರು ಎಂಬ ಕಾರಣದಿಂದ ಅವರಿಗೆ ಮೇಲ್ಮನವಿಯನ್ನು ಸಲ್ಲಿಸಬಹುದು. ಮೇಲ್ಮನವಿದಾರರಿಗೆ  ಅರ್ಜಿಯು ಹತ್ತು ದಿವಸದ ಒಳಗೆ ಆಯಾ ಜಿಲ್ಲೆಗಳ ಕಮಿಷನರ್ ಆಫೀಸ್‌ಗಳಿಂದ ಲಭಿಸುವುದು. ಪೌರತ್ವ ನಿರಾಕರಿಸಲ್ಪಟ್ಟ ದಾಖಲೆಗಳನ್ನು ಕೈವಶಪಡಿಸಿದ ದಿನಾಂಕದಿಂದ 120 ದಿವಸಗಳ ಒಳಗೆ ವಿದೇಶ ಟ್ರಿಬ್ಯೂನಲ್(ಎಫ್‌ಟಿ ಕೋರ್ಟ್)ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಆದರೆ ಈ ಪ್ರಕ್ರಿಯೆ ಇಲ್ಲಿಯವರೆಗೆ ಔಪಚಾರಿಕವಾಗಿ ಆರಂಭಿಸಿಲ್ಲ.

ಸರಿಯಾದ ವೇಳೆಯಲ್ಲಿ ಈ ಪ್ರಕ್ರಿಯೆ ಆರಂಭಿಸಿ ನಿಶ್ಚಿತ ಅವಧಿಯ ಒಳಗೆ ಎಲ್ಲರೂ ಮನವಿ ಸಲ್ಲಿಸಿದರೂ ಸರಕಾರ ಎದುರಿಸುವ ಸವಾಲುಗಳು ಕಡಿಮೆಯೇನಲ್ಲ. 19.6 ಲಕ್ಷ ಮನವಿಗಳನ್ನು ಎಫ್‌ಟಿ ಕೋರ್ಟ್‌ಗಳಲ್ಲಿ ಒಂದು ವರ್ಷದ ಒಳಗೆ ವಾದವನ್ನು ಆಲಿಸಿ ಮುಗಿಸಬೇಕಾಗಬಹುದು. ಇನ್ನು ಮನವಿಗಳನ್ನು ತಳ್ಳಿ ಹಾಕಿ ಅರ್ಜಿದಾರರನ್ನು ವಿದೇಶಿಗಳೆಂದು ಘೋಷಿಸಿದರೆ ಗೃಹ ಮಂತ್ರಾಲಯದ ಮತ್ತು ಎನ್‌ಆರ್‌ಸಿ ಕೋಆರ್ಡಿನೇಟರ್ ಅಭಿಪ್ರಾಯ ಪ್ರಕಾರ ಅವರು ಬಾಂಗ್ಲಾದೇಶಿಗಳಾಗಿರುತ್ತಾರೆ. ಸಹಜವಾಗಿಯೇ 19.6 ಲಕ್ಷ ಜನರಿಗೆ ನೆಲೆ ಕಲ್ಪಿಸುವ ವಿಚಾರ ಅತ್ಯಂತ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ಬಾಕಿಯಾಗುತ್ತದೆ.

ಆದರೆ ಇಷ್ಟೊಂದು ಜನರನ್ನು ಬಾಂಗ್ಲಾದೇಶಿಗಳೆಂದು ಸಾಬೀತುಪಡಿಸುವ ಯಾವುದೇ ಪುರಾವೆಯು ಗೃಹ ಸಚಿವಾಲಯ ಅಥವಾ ಎನ್‌ಆರ್‌ಸಿ ಕೋಆರ್ಡಿನೇಟರ್ ಕೈಯಲ್ಲಿಲ್ಲ. ಮಾತ್ರವಲ್ಲ, ಇವರನ್ನು ಗಡಿಪಾರು ಮಾಡಲು ಬಾಂಗ್ಲಾದೇಶದೊಂದಿಗೆ ಯಾವುದೇ ರೀತಿಯ ಒಪ್ಪಂದವು ಸದ್ಯಕ್ಕಿಲ್ಲ. ಒಟ್ಟಿನಲ್ಲಿ ಅವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆದ್ದರಿಂದ ಅವರನ್ನು ಅಸ್ಸಾಂನ ಬಂಧನ ಕೇಂದ್ರದಲ್ಲಿ ಇಡುವುದು ಮಾತ್ರವೇ ಸರಕಾರದ ಮುಂದಿರುವ ದಾರಿ. ಆದರೆ, ಸದ್ಯ ಇಷ್ಟೊಂದು ಜನರಿಗೆ ಅಸ್ಸಾಂ ಜೈಲುಗಳು ಪರ್ಯಾಪ್ತವಲ್ಲ ಎಂಬುದು ಸರಕಾರವು ಎದುರಿಸುತ್ತಿರುವ ತೊಂದರೆಯಾಗಿದೆ.

ಅಸ್ಸಾಮಿನ ಜೈಲುಗಳು

6 ಸೆಂಟ್ರಲ್ ಜೈಲುಗಳು, 22 ಜಿಲ್ಲಾ ಜೈಲುಗಳು, 1 ಪ್ರತ್ಯೇಕ ಜೈಲು, 1 ತೆರೆದ ಜೈಲು, 1 ಸಬ್ ಜೈಲು ಎಂಬಿತ್ಯಾದಿ ಸದ್ಯ 31 ಜೈಲುಗಳು ಅಸ್ಸಾಂನಲ್ಲಿದೆ. ಗುವಾಹಟಿ, ತೇಜ್ಪುರ, ಸಿಲ್ಚಾರ್, ದಿಬ್ರುಗಡ್, ಜೋರ್ಹತ್, ನಾಗಾನ್ ಎಂಬಿತ್ಯಾದಿ ಸೆಂಟ್ರಲ್ ಜೈಲುಗಳಿವೆ. ನಲ್ಬಾರಿ, ಬಾರ್ಪೆಟ, ಕೊಕ್ರೊಜಾರ್, ಧುಬ್ರಿ, ಗೋಲ್ಪಾರ, ಮಂಗಲ್ಡೊಯ್, ಹೈಲಕಂಡಿ, ಕರೀಮ್‌ಗಂಜ್, ನಾರ್ತ್ ಲಖಿಂಪುರ, ಶಿವಸಾಗರ್, ಗೋಲಾಘಾಟ್, ಮಜುಲಿ, ಅಭಯಪುರಿ, ಡಿಫೂ, ಹ್ಯಾಮ್ರೆನ್, ಬಿಸ್ವಾನಾಥ್ ಚರಿಯಾಲಿ, ಧೆಮಾಜಿ, ಮೋರಿಗಾಂವ್, ಸೋನಾರಿ, ಟಿನ್ಸುಕಿಯ, ಸಡಿಯಾ, ಉದಲ್‌ಗುರಿ ಎಂಬಿತ್ಯಾದಿ ಜಿಲ್ಲಾ ಜೈಲುಗಳಿವೆ. ನಾಗಾನ್ ಸ್ಪೆಶಲ್ ಜೈಲ್, ಜೋರ್ಹತ್ ಬಯಲು ಜೈಲು, ಹಫ್ಲಾಂಗ್ ಸತ್ಯೇ ಎಂಬಿತ್ಯಾದಿ ಇತರವೂ ಇದೆ.

ಅಸ್ಸಾಂನ ಜೈಲುಗಳಲ್ಲಿ ಪುರುಷರಿಗೂ, ಮಹಿಳೆಯರಿಗೂ ಸೇರಿ 8,888 ಜನರನ್ನು ಒಳಗೊಳ್ಳುವ ಸೌಕರ್ಯ ಮಾತ್ರವೇ ಇದೆ. ಆದರೆ  2018, ಮೇ 15ರ ವರೆಗಿರುವ ಲೆಕ್ಕ ಪ್ರಕಾರ 8,539 ಪುರುಷರು, 407 ಮಹಿಳೆಯರು ಸೇರಿ 8,946 ಮಂದಿಯನ್ನು ಕೂಡಿಹಾಕಲಾಗಿದೆ. ಇದರ ಹೊರತಾಗಿ ಬಂಧಿತರ ಪೈಕಿ 77ರಷ್ಟು ಮಕ್ಕಳನ್ನು ಅದೇ ಜೈಲಿನಲ್ಲಿ ಕೂಡಿಹಾಕಲಾಗಿದೆ. ಒಟ್ಟಿನಲ್ಲಿ ಈಗಾಗಲೇ ಜೈಲುಗಳಲ್ಲಿ ಬಂಧಿತರ ಪ್ರಮಾಣವು ಹೆಚ್ಚಿದೆ. ಅಸ್ಸಾಂನಾದ್ಯಂತ ಹೊಸ ಜೈಲುಗಳನ್ನು ನಿರ್ಮಿಸಿದರೆ ಮಾತ್ರ ಬಂಧಿತರಿಗೆ ಸೌಕರ್ಯ ಒದಗಿಸಬಹುದು. ಪೌರತ್ವ ಪಟ್ಟಿಯಿಂದ ಹೊರತಾದವರನ್ನು ಏನು ಮಾಡುವಿರಿ ಎಂಬ ಪ್ರಶ್ನೆಗೆ ಗೃಹಮಂತ್ರಿಗಾಗಲೀ, ಎನ್‌ಆರ್‌ಸಿ ಸಂಯೋಜಕನಿಗಾಗಲೀ  ಯಾವುದೇ   ಕಲ್ಪನೆ ಇಲ್ಲ ಎಂಬ ವಿಚಾರವನ್ನು ಎನ್‌ಸಿಎಚ್‌ಆರ್‌ಒ ಚೇಯರ್ ಪರ್ಸನ್ ಎ.ಮಾರ್ಕ್ಸ್ ವ್ಯಕ್ತಪಡಿಸುತ್ತಾರೆ. (ಇಂಟರ್‌ವೆನ್ಶನ್ ಇನ್ ಅಸ್ಸಾಂ ಇಶ್ಯೂ 2012-18 ಎನ್‌ಸಿಎಚ್‌ಆರ್‌ಒ ಬುಲೆಟಿನ್ 2018 ಡಿಸೆಂಬರ್)

ಆರ್ಥಿಕ ಹೊರೆ

ದೇಶದ ಪ್ರತಿಯೊಬ್ಬ ವ್ಯಕ್ತಿಯಿಂದಲೂ ಕನಿಷ್ಟ 10 ರೂ. ಸರಕಾರಕ್ಕೆ ಪ್ರತಿದಿನ ಲಭಿಸುತ್ತಿದೆ. ಅದು ಪೌರತ್ವ ಇರುವವರಿಂದಲೂ, ಇಲ್ಲದಿರುವವರಿಂದಲೂ, ಪರೋಕ್ಷವಾಗಿಯೋ, ನೇರವಾಗಿಯೋ ಲಭಿಸುವ ತೆರಿಗೆಯಾಗಿರುತ್ತದೆ. ಪ್ರತಿದಿನ 1.91 ಕೋಟಿ, ಒಂದು ವರ್ಷಕ್ಕೆ 697.2 ಕೋಟಿ ಅಸ್ಸಾಂನಿಂದ ಲಭಿಸುತ್ತದೆ. ಆದರೆ 19 ಲಕ್ಷ ಜನರನ್ನು ಜೈಲಿನಲ್ಲಿಟ್ಟರೆ ಈ ವರಮಾನ ಕಳೆದುಕೊಳ್ಳಲಿದೆ. ಅದರ ಜೊತೆಗೆ ಬಂಧಿತರಿಗೆ ಸರಕಾರ  ಹಣ ವ್ಯಯಿಸಬೇಕಾಗುತ್ತದೆ. ಮೂಲಭೂತ ಸೌಕರ್ಯಗಳು ಜೈಲು(ನಿರಾಶ್ರಿತ ವಸತಿ), ಆಹಾರ, ಆರೋಗ್ಯ, ಶುಚಿತ್ವ, ವಿದ್ಯುತ್, ಪಾಲನೆ, ಅಧಿಕಾರಿಗಳ ಸಂಬಳ 19.06 ಲಕ್ಷ ಜನರನ್ನು ಜೈಲಿನಲ್ಲಿಡುವ ಸುರಕ್ಷಾ ಕ್ರಮಗಳು ಎಂಬಿತ್ಯಾದಿಗಳಿಗೆ ಕನಿಷ್ಠ ಪ್ರತೀದಿನ ಒಬ್ಬನಿಗೆ ನೂರು ರೂಪಾಯಿ ವ್ಯಯಿಸಬೇಕಾಗುತ್ತದೆ. ಅಂದರೆ ಖಜಾನೆಯಿಂದ ಪ್ರತೀದಿನ 19.6 ಕೋಟಿ ರೂಪಾಯಿ ವ್ಯಯಿಸಬೇಕಾಗುತ್ತದೆ ಎಂದರ್ಥ. ಘೋಷಿತ ವಿದೇಶಿಗಳನ್ನು ಜೈಲಿನಲ್ಲಿಡಲು ವರ್ಷವೊಂದಕ್ಕೆ ಹೆಚ್ಚು-ಕಡಿಮೆ 6,956.9 ಕೋಟಿ ರೂಪಾಯಿಯಷ್ಟು ಖರ್ಚಾಗುವುದು. 2019-20 ಆರ್ಥಿಕ ವರ್ಷದಲ್ಲಿ ಕೇಂದ್ರ ಸರಕಾರ ನಿರೀಕ್ಷಿಸುವ ವರಮಾನ 2,082,589 ಕೋಟಿ ರೂಪಾಯಿಯಾಗಿರುತ್ತದೆ. 2019-20ರಲ್ಲಿ 2,786,394 ಕೋಟಿ ರೂಪಾಯಿ ಖರ್ಚು ಮಾಡಲು ಸರಕಾರ ಮೀಸಲಿಟ್ಟಿದೆ.  ಈ ಮಧ್ಯೆ 7,003,760 ಕೋಟಿ ಕೊರತೆ ಬಜೆಟ್ ಇದೆ. ಆರ್ಥಿಕ ಮಂದಗತಿಯ ಈ ಘಟ್ಟದಲ್ಲಿ ಸಾವಿರಾರು ಮಂದಿಯ ಸಣ್ಣ ಉದ್ಯಮಗಳು ಮುಚ್ಚಲಾಗಿದೆ. ಲಕ್ಷಾಂತರ ಜನರ ಉದ್ಯೋಗ ನಷ್ಟಗೊಂಡ ಸನ್ನಿವೇಶ ನಮ್ಮ ಮುಂದಿದೆ. ಈ ವಿಷಮ ಪರಿಸ್ಥಿತಿಯಲ್ಲಿ ವಿದೇಶಿಗಳೆಂದು ಮುದ್ರೆಯೊತ್ತಿ 19.06 ಲಕ್ಷ ಬಂಧಿತರಿಗಾಗಿ ಕನಿಷ್ಠ 6,009,56.9 ಕೋಟಿ ರೂಪಾಯಿ ವ್ಯಯಿಸುವುದು ಎಲ್ಲಿಂದ  ಎಂಬುದು ಕಗ್ಗಂಟಾಗಿ ಪರಿಣಮಿಸಲಿದೆ.

19 ಲಕ್ಷ ಮಂದಿಯ ಭವಿಷ್ಯ

ತಮ್ಮ ಪೌರತ್ವವನ್ನು ಸಾಬೀತುಪಡಿಸಲು ವಿದೇಶೀ ಟ್ರಿಬ್ಯೂನಲ್‌ಗಳಿಗೆ(ಎಫ್‌ಟಿ ಕೋರ್ಟ್‌ಗಳು) ಮುಂದೆ ಮನವಿ ಸಲ್ಲಿಸಲು ಎನ್‌ಆರ್‌ಸಿಯಿಂದ ಹೊರದಬ್ಬಲ್ಪಟ್ಟ 19 ಲಕ್ಷ ಜನರಿಗೆ 120 ದಿವಸಗಳ ಸಮಯಾವಕಾಶವನ್ನು ಸರಕಾರ ನೀಡಿದೆ. ಸದ್ಯ ಅಸ್ಸಾಂನಲ್ಲಿ 100 ಎಫ್‌ಟಿ ನ್ಯಾಯಾಲಯಗಳು ಕಾರ್ಯಾಚರಿಸುತ್ತಿದೆ. ಈ ಟ್ರಿಬ್ಯೂನಲ್‌ಗಳಲ್ಲಿ ಸಾವಿರಾರು ಮಂದಿ ಡಿ-ವೋಟರ್ (ಸಂಶಯಾಸ್ಪದ ವೋಟರ್‌ಗಳು) ಕೇಸುಗಳು ತೀರ್ಪು ನೀಡದೆ ಈಗಲೂ ಬಾಕಿ ಉಳಿದಿದೆ. ಅವರ ಹೆಸರುಗಳು ವೋಟರ್ ಪಟ್ಟಿಯಲ್ಲಿ ಇದ್ದೂ ಕೂಡ, ವಿದೇಶಿಗಳಾಗಿರುವರು ಎಂಬ ಸಂಶಯದಲ್ಲಿ ಗಡಿಯ ಪೊಲೀಸರು ಅವರ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಅಂದರೆ ಇವರೆಲ್ಲರೂ ಬಾಂಗ್ಲಾದೇಶಿಗಳಾಗಿರಬಹುದು ಎಂಬ ಧೋರಣೆ. ಡಿ-ವೋಟರ್‌ಗಳ ಮೊಕದ್ದಮೆಗಳ ಅವಲೋಕನವು ಈ ಕೋರ್ಟುಗಳ ಕಾರ್ಯಕ್ಷಮತೆಯನ್ನು ತಿಳಿಸುತ್ತಿದೆ.

ಕಳೆದ 13 ವರ್ಷಗಳಲ್ಲಿ 2,219,36 ಕೇಸುಗಳಲ್ಲಿ 83,471 ಕೇಸುಗಳು ಮಾತ್ರ ಟ್ರಿಬ್ಯೂನಲ್‌ಗಳಲ್ಲಿ ತೀರ್ಪಾಗಿದೆ. ಅಂದರೆ, 2012 ಮಾರ್ಚ್ ವರೆಗೆ ಪ್ರತೀ ವರ್ಷ 6,420 ಕೇಸುಗಳು. ಇದೇ ಪ್ರಕಾರ 1,38,465 ಕೇಸುಗಳು ತೀರ್ಪು ಪಡೆಯಲು 4 ದಶಕಗಳು ಬೇಕಾಗಬಹುದು ಎಂದರ್ಥ.  ತೀರ್ಪು ನೀಡಿದ 83,471 ಕೇಸುಗಳಲ್ಲಿ 5,577 ಜನರು ಮಾತ್ರ  ಡಿ-ವೋಟರ್‌ಗಳಾಗಿದ್ದರು. ಅಂದರೆ 6.6 ಶೇಕಡ ಕೇಸುಗಳಷ್ಟೇ ಗಡಿಪಾರು ಮಾಡಬೇಕಾದ ವಿದೇಶಿಗಳೆಂದು ತಿಳಿದುಬಂದದ್ದು. ಶೇ.93ರಷ್ಟ್ಟು ಕೇಸುಗಳು (77,894 ಜನರಿಗೆ ಡಿ-ವೋಟರ್‌ಗಳೆಂಬ ಆರೋಪ) ಸುಳ್ಳು ಮತ್ತು ನಿರಾಧಾರವಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣದ ಕಾಲಾವಧಿಯಲ್ಲಿ  (1997-2011) 77,894 ಮಂದಿ ನೈಜ ಭಾರತೀಯ ಪೌರರು ಅವರ ಮತದಾನ ಹಕ್ಕು ಕಳೆದುಕೊಂಡಿದೆ. ಕಳೆದ 13 ವರ್ಷಗಳಲ್ಲಿ (2012 ಮಾರ್ಚ್ ವರೆಗೆ) ಇತರ ಸಾಂವಿಧಾನಿಕ ಹಕ್ಕುಗಳು ನಿರಾಕರಿಸಲ್ಪಟ್ಟಿತು. ಈಗಾಗಲೇ ಶೇ.6.6.ರಷ್ಟು ಜನರಲ್ಲಿ ಹೆಚ್ಚಿನ ಜನರಿಗೆ ವಿದೇಶೀಯರೆಂಬ ಹಣೆಪಟ್ಟಿ ಅಂಟಿಸಲಾಗಿದೆ. ಕಾನೂನಿನ ಅಜ್ಞತೆ, ಅನಕ್ಷರತೆ, ಆರ್ಥಿಕ ದುಸ್ಥಿತಿ, ನೋಟಿಸ್ ಲಭಿಸದಿರುವುದು, ಗೈರು ಹಾಜರಿ ಮತ್ತು ಒಟ್ಟು ತೀರ್ಪುಗಳಲ್ಲಿ ಅಧಿಕಾರಿಗಳು ತೋರಿದ ಪಕ್ಷಪಾತ ಧೋರಣೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂಬ ವಿಚಾರವನ್ನು ನಾವು ತಿಳಿದುಕೊಳ್ಳಬೇಕು.


ವಿದೇಶೀ ಟ್ರಿಬ್ಯೂನಲ್‌ಗಳ ಮುಂದೆ ಮೂರು ರೀತಿಯ ಪ್ರಕರಣಗಳು

  1. 1983ರ ಐಎಮ್(ಡಿ)ಟಿ ವಿಧಿ ಪ್ರಕಾರ ಐಎಮ್‌ಡಿ (Illegal migrants-determination) ಟ್ರಿಬ್ಯೂನಲ್‌ನಿಂದ 12.7.2005ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ವಿದೇಶ ಟ್ರಿಬ್ಯೂನಲ್‌ಗೆ ವರ್ಗಾಯಿಸಿದ ಪ್ರಕರಣಗಳು.
  2. ಪೊಲೀಸ್ ಏಕಪಕ್ಷೀಯವಾಗಿ ಎಫ್‌ಟಿಯನ್ನು ಪರಾಮರ್ಶಿಸುವ ಪ್ರಕರಣಗಳು
  3. 1997ರಿಂದ ಎಫ್‌ಟಿ ಪರಾಮರ್ಶಿಸುವ ಡಿ-ವೋಟರ್‌ಗಳು ಅಸ್ಸಾಂ ಅಡಿಶನಲ್ ಡಿಜಿಪಿ (ಬಾರ್ಡರ್)ಯಿಂದ ದೊರೆತ 2009ರಲ್ಲಿ 1334ರ ಡಬ್ಲೂ(ಸಿ) ನಂಬರ್ 8.3.2011 ಕ್ಕೆ ಗುವಾಹಟಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ವರದಿ ಪ್ರಕಾರ, ಮೇಲೆ ಹೇಳಿದ ಮೂರು ರೀತಿಯ ಪ್ರಕಾರ ಒಟ್ಟು 4,06,451 ಪ್ರಕರಣಗಳು 1996-2010 ರ ಮಧ್ಯೆ ಎಫ್‌ಟಿಗೆ ಶಿಫಾರಸು ಮಾಡಿತು.

ವಿವಿಧ ರೀತಿಯ ಲೆಕ್ಕ

  1. ಸುಪ್ರೀಂ ಕೋರ್ಟ್ ಐಎಮ್‌ಡಿಟಿ ವಿಧಿ ಅಸಿಂಧುಗೊಂಡ ನಂತರ ವಿದೇಶೀ ಟ್ರಿಬ್ಯೂನಲ್ ಕೋರ್ಟ್‌ಗೆ ವರ್ಗಾಯಿಸಿದ ಪ್ರಕರಣಗಳು 88,770
  2. ಪೊಲೀಸ್ ನೇರವಾಗಿ ಎಫ್‌ಟಿಗೆ ಸಲ್ಲಿಸಿದ ಪ್ರಕರಣಗಳು 95,745
  3. 1997ರಿಂದ 31.1.2011ರ ವರೆಗೆ ಎಫ್‌ಟಿಯ ಮುಂದೆ ಬಂದ ಡಿ-ವೋಟರ್ ಪ್ರಕರಣಗಳು 2,21,936

ಒಟ್ಟು ಪ್ರಕರಣಗಳು: 4,06,451

ಒಟ್ಟಿನಲ್ಲಿ 1997ರಿಂದ 31.1.2011ರ ವರೆಗೆ ಒಟ್ಟು 2,21,936 ಡಿ-ವೋಟರ್ ಪ್ರಕರಣಗಳು ಟ್ರಿಬ್ಯೂನಲ್‌ನ ಮೇಲ್ನೋಟದಲ್ಲಿದೆ.

(ಲೇಖಕರು ಎನ್‌ಸಿಎಚ್‌ಆರ್‌ಒ ಕಾರ್ಯದರ್ಶಿ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಸಮಿತಿ ಸದಸ್ಯರು)

LEAVE A REPLY

Please enter your comment!
Please enter your name here