ಪೋಷಕರ ಸಾವಿನಿಂದ ಒಂದು ವರ್ಷದಲ್ಲಿ 3621 ಮಕ್ಕಳು ಅನಾಥ !

Prasthutha|

ನವದೆಹಲಿ: ಕಳೆದ ವರ್ಷದ ಏಪ್ರಿಲ್ 1 ಮತ್ತು ಈ ವರ್ಷದ ಜೂನ್ 5 ರ ನಡುವೆ ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡು 3,621 ಮಕ್ಕಳು ಅನಾಥರಾಗಿದ್ದಾರೆ. ಒಟ್ಟು 26,176 ಪೋಷಕರು ಮೃತಪಟ್ಟಿದ್ದು, 274 ಮಂದಿ ಮಕ್ಕಳು ಪರಿತ್ಯಕ್ತರಾಗಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ-ಎನ್‌ಸಿಪಿಸಿಆರ್, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದೆ.
ಆದಾಗ್ಯೂ, ಪೋಷಕರ ಸಾವುಗಳು ಕೇವಲ ಕೋವಿಡ್ -19 ಗೆ ಸಂಬಂಧಿಸಿಲ್ಲ, ಇತರ ಕಾರಣಗಳಿಂದಲೂ ಆಗಿರಬಹುದು ಎಂದು ಆಯೋಗವು ತನ್ನ ಅಫಿದವಿತ್ ನಲ್ಲಿ ಸ್ಪಷ್ಟಪಡಿಸಿದೆ.


30,071 ಮಕ್ಕಳಲ್ಲಿ 15,620 ಬಾಲಕರು, 14,447 ಬಾಲಕಿಯರು ಮತ್ತು ನಾಲ್ವರು ತೃತೀಯ ಲಿಂಗಿ ಮಕ್ಕಳ ಆರೈಕೆ ಮತ್ತು ಪೋಷಣೆ ಅವಶ್ಯಕತೆ ಇದೆ ಎಂದು ಆಯೋಗ ತಿಳಿಸಿದೆ.
11,815 ಮಕ್ಕಳು 8ರಿಂದ 13 ವಯಸ್ಸಿನವರಾಗಿದ್ದರೆ, 4-7 ವಯಸ್ಸಿನ 5,107 ಮಕ್ಕಳಿದ್ದಾರೆ.
ಸುಪ್ರೀಂಕೋರ್ಟ್ ನ ಆದೇಶದ ನಂತರ ಎನ್‌ಸಿಪಿಸಿಆರ್‌ನ ‘ಬಾಲ್ ಸ್ವರಾಜ್’ ಪೋರ್ಟಲ್‌ನಲ್ಲಿ ಈ ಅಂಕಿ ಅಂಶಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಪ್‌ಲೋಡ್ ಮಾಡಿವೆ.

- Advertisement -


ಮಹಾರಾಷ್ಟ್ರದಲ್ಲಿ 7,084 ಮಕ್ಕಳ “ಆರೈಕೆ ಮತ್ತು ರಕ್ಷಣೆಯ ಅವಶ್ಯಕತೆ” ಇದೆ. ಅನಾಥ ಮಕ್ಕಳಿಗೆ ಆರೈಕೆ ಅವಶ್ಯಕತೆ ಇರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ರಾಜಸ್ಥಾನದಲ್ಲಿ 2,482 ಮಕ್ಕಳಿಗೆ ಪೋಷಣೆ ಅಗತ್ಯವಿದೆ. ನಂತರ ಸ್ಥಾನಗಳಲ್ಲಿ ಕ್ರಮವಾಗಿ ಹರಿಯಾಣ (2,438), ಮಧ್ಯಪ್ರದೇಶ (2,243) ಮತ್ತು ಕೇರಳ (2,002) ರಾಜ್ಯಗಳಿವೆ.

- Advertisement -