ಪುಣೆ | ಶಿವಸೇನೆ ಲೋನವಾಲ ಘಟಕದ ಮಾಜಿ ಅಧ್ಯಕ್ಷ ರಾಹುಲ್ ಶೆಟ್ಟಿ ಗುಂಡಿಕ್ಕಿ ಹತ್ಯೆ

Prasthutha|

ಪುಣೆ : ಇಲ್ಲಿನ ಲೋನವಾಲದಲ್ಲಿ ಸ್ಥಳೀಯ ಶಿವಸೇನಾ ನಾಯಕ ರಾಹುಲ್ ಉಮೇಶ್ ಶೆಟ್ಟಿ (43) ಹತ್ಯೆ ನಡೆದಿದೆ. ಸ್ಥಳೀಯ ಶಿವಸೇನೆ ಘಟಕದ ಮಾಜಿ ಅಧ್ಯಕ್ಷರಾದ ರಾಹುಲ್ ಅವರಿಗೆ ದುಷ್ಕರ್ಮಿಗಳು ಗುಂಡಿಕ್ಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆ. ರಾಹುಲ್ ಅವರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಮೊದಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಆಯುಧದಿಂದ ತಿವಿದವನನ್ನು ಗುರುತಿಸಲಾಗಿದೆ, ಶೀಘ್ರದಲ್ಲೇ ಅಪರಾಧಿಗಳನ್ನು ಬಂಧಿಸಲಾಗುತ್ತದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಪ್ರದೇಶದ ಹನುಮಾನ್ ತೆಕ್ಡಿಯಲ್ಲಿ ನಿನ್ನೆ ಗಣೇಶ್ ನಾಯ್ಡು ಎಂಬವರ ಕೊಲೆ ನಡೆದಿದೆ. ಈ ಕೊಲೆಗೂ, ರಾಹುಲ್ ಹತ್ಯೆಗೂ ಸಂಬಂಧವಿದೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದ್ದಾರೆ.

- Advertisement -