November 24, 2020

ಪಿ.ಎಫ್.ಐ ಸದಸ್ಯತ್ವ ಹೊಂದುವುದು ಅಪರಾಧವೇ: ಗೃಹ ಇಲಾಖೆಯನ್ನು ಪ್ರಶ್ನಿಸಿದ ಸಾಕೇತ್ ಗೋಖಲೆ

‘’ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನೆಂಬ ಆರೋಪದಲ್ಲಿ ಪತ್ರಕರ್ತ ಸಿದ್ದೀಕ್ ಕಾಪ್ಪನ್ ರನ್ನು ಬಂಧಿಸಲಾಗಿದೆ. ಪಿ.ಎಫ್.ಐ ಯೊಂದಿಗೆ ಹಣಕಾಸಿನ ಸಂಪರ್ಕ ಹೊಂದಿದ್ದಾರೆ ಎಂಬ ಕಾರಣಕ್ಕೆ ಮೋದಿ ಸರಕಾರ ಭೀಮ್ ಆರ್ಮಿ ಮುಖ್ಯಸ್ಥರನ್ನು ಬೇಟೆಯಾಡುತ್ತಿದೆ. ಹಾಗಾದರೆ ಪಿ.ಎಫ್.ಐ ನಿಷೇಧಿತ ಸಂಘಟನೆಯೇ?’’ – ಹೀಗೊಂದು ಪ್ರಶ್ನೆಯನ್ನು ಆರ್.ಟಿ.ಐ ಕಾರ್ಯಕರ್ತ ಸಾಕೇತ್ ಗೋಖಲೆ ಟ್ವಿಟ್ಟರ್ ನಲ್ಲಿ ಕೇಳಿದ್ದಾರೆ.

ಆರ್.ಟಿ.ಐ ಅಡಿಯಲ್ಲಿ ತಾನು ಮಾಹಿತಿ ಕೋರಿ ಗೃಹ ಸಚಿವಾಲಯದ ಮುಂದೆ ಸಲ್ಲಿಸಿದ ಅರ್ಜಿಯನ್ನು ಪ್ರಕಟಿಸಿ ಈ ಪ್ರಶ್ನೆಯನ್ನುಟ್ವಿಟ್ಟರ್ ನಲ್ಲಿ ಕೇಳಿದ್ದಾರೆ.

“ಗೃಹ ವ್ಯವಹಾರಗಳ ಸಚಿವಾಲಯ/ಭಾರತ ಸರಕಾರದ ದಾಖಲೆಗಳ ಪ್ರಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಿತ ಸಂಘಟನೆಯೇ? ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವೈಯಕ್ತಿಕ ಸದಸ್ಯತ್ವ ಹೊಂದುವುದು ಭಾರತದ ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರ ಗುರುತಿಸಬಹುದಾದ ಅಪರಾಧವೇ?” ಎಂದು ಅವರು ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.

ನಿಷೇಧಿತ ಸಂಘಟನೆ ಅಲ್ಲದಿದ್ದರೆ ಇದು ಬೇಟೆಯಾಗಿದೆ ಎಂದು ಅವರು ಬರೆದಿದ್ದಾರೆ.

ಹಲವು ಆರ್.ಟಿ.ಐ ಅರ್ಜಿಗಳನ್ನು ಸಲ್ಲಿಸಿ ಸರಕಾರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹೊರಗೆಳೆದ ಖ್ಯಾತಿ ಸಾಕೇತ್ ಗೋಖಲೆಗಿದೆ. ಈ ಹಿಂದೆ ಅವರು ಪ್ರಧಾನಿ ಮೋದಿಯವರ ಆಸ್ತಿಗಳ ಕುರಿತು ತನಿಖೆಯಾಗಬೇಕೆಂದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಸುದ್ದಿಯಾಗಿತ್ತು. ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯಬೇಕಿದ್ದ ಭೂಮಿ ಪೂಜೆ ಸಮಾರಂಭಕ್ಕೆ ತಡೆನೀಡಬೇಕೆಂದು ಕೋರಿಯೂ ಇತ್ತೀಚೆಗೆ ಅವರು ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!