ಪಾಕ್ ಉಗ್ರರಿಗೆ ಹಣಕಾಸು ನೆರವು: ಮಾಜಿ ಬಜರಂಗದಳದ ಮುಖಂಡನ ಬಂಧನ

0
43

ಭೋಪಾಲ್: ಪಾಕ್ ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಮಾಜಿ ಬಜರಂಗದಳದ ಮುಖಂಡ ಬಲರಾಂ ಸಿಂಗ್ ಸೇರಿದಂತೆ ಒಟ್ಟು ನಾಲ್ವರನ್ನು ಮಧ್ಯಪ್ರದೆಶದ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಬಂಧಿತ ಬಜರಂಗ ದಳದ ಮುಖಂಡ 2017ರಲ್ಲೂ ಇದೇ ಆರೋಪದಲ್ಲಿ ಬಂಧನವಾಗಿ ಕಳೆದ ವರ್ಷ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ.

ಪಾಕಿಸ್ತಾನ ಮಾರ್ಗದರ್ಶನದ ಬೇಹುಗಾರಿಕೆ-ಉಗ್ರರ ಹಣಕಾಸು ನೆರವು ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಇತ್ತೀಚೆಗೆ ಬಲರಾಂ ಸಿಂಗ್ ಹಾಗೂ ಇತರ ಮೂವರನ್ನು ಸಟ್ನಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಸಿಂಗ್ ಹಾಗೂ ಆತನ ಸಹಚರರನ್ನು ಎಟಿಎಸ್ ತನ್ನ ವಶಕ್ಕೆ ಪಡೆದಿದೆ.

ಪಾಕಿಸ್ತಾನದ ಸಂಚಾಲಕರೊಂದಿಗೆ ಸಂಪರ್ಕ ಹೊಂದಿದ ಬಂಧಿತ ಆರೋಪಿಗಳು ರಣತಂತ್ರದ ಮಾಹಿತಿಯನ್ನು ಮತ್ತು ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳುತ್ತಿದ್ದರು ಹಾಗೂ ಸಂಶಯಾಸ್ಪದ ಗಡಿಯಾಚೆಗಿನ ಹಣಕಾಸು ವ್ಯವಹಾರಗಳನ್ನು ಕೈಗೊಳ್ಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here