ಪಶ್ಚಿಮ ಬಂಗಾಳ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದೆ : ಪ್ರಧಾನಿ ಮೋದಿ

Prasthutha|

ಕೊಲ್ಕತಾ : ಪಶ್ಚಿಮ ಬಂಗಾಳ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೊಲ್ಕತಾದಲ್ಲಿ ದುರ್ಗಾ ಪೂಜೆಯ ಪೆಂಡಾಲ್ ಗಳನ್ನು ಉದ್ಘಾಟಿಸಿ, ವೀಡಿಯೊ ಕಾನ್ಫರೆನ್ಸ್ ಮೂಲಕ ಅವರು ಪಶ್ಚಿಮ ಬಂಗಾಳದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ

ಜನತೆಗೆ ದುರ್ಗಾ ಪೂಜೆ ಮತ್ತು ದೀಪಾವಳಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ, ಇಂತಹ ಶುಭ ಸಂದರ್ಭದಲ್ಲಿ ನಿಮ್ಮೊಂದಿಗಿರಲು ಸಿಕ್ಕಿರುವ ಅವಕಾಶ ಗೌರವಾತ್ಮಕವಾದುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ದುರ್ಗಾ ಪೂಜೆಯು ಪಶ್ಚಿಮ ಬಂಗಾಳದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಇತಿಹಾಸದಲ್ಲಿ ಅವಶ್ಯಕತೆ ಬಿದ್ದಾಗಲೆಲ್ಲಾ ಪಶ್ಚಿಮ ಬಂಗಾಳ ಭಾರತಕ್ಕೆ ದಾರಿಯನ್ನು ತೋರಿಸಿಕೊಟ್ಟಿದೆ. ದೇಶವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವುದಕ್ಕೆ ಬಂಗಾಳದ ಹಲವಾರು ಪ್ರತಿಷ್ಠಿತ ವ್ಯಕ್ತಿಗಳು ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದ ಅವರು, ಬಂಗಾಳಿ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳನ್ನು ಈ ಸಂದರ್ಭ ಸ್ಮರಿಸಿದ್ದಾರೆ.

ರಾಜ್ಯದ ಎಲ್ಲಾ 78,000 ಬೂತ್ ಗಳಲ್ಲಿ ಪ್ರಧಾನಿ ಅವರ ಭಾಷಣ ಕೇಳಲು ಟಿವಿ ಸ್ಕ್ರೀನ್ ಗಳನ್ನು ಅಳವಡಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.

- Advertisement -