ಪವರ್ ಸ್ಟೇಶನ್ ನಲ್ಲಿ ಬೆಂಕಿ ಅವಘಡ | 9 ಮಂದಿ ಒಳಗೆ ಸಿಲುಕಿರುವ ಭೀತಿ

ಹೈದರಾಬಾದ್ : ತೆಲಂಗಾಣದ ಶ್ರೀಶೈಲಂ ಪವರ್ ಸ್ಟೇಶನ್ ನಲ್ಲಿ ಕಳೆದ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 9 ಮಂದಿ ಪವರ್ ಸ್ಟೇಶನ್ ಒಳಗೆ ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗಿದೆ. 6 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದ್ದು, ಅವರು ಶ್ರೀ ಶೈಲಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪವರ್ ಸ್ಟೇಶನ್ ಒಳಗೆ ಸಿಲುಕಿರುವವರಲ್ಲಿ ಓರ್ವ ಮಹಿಳಾ ಅಧಿಕಾರಿಯೂ ಇದ್ದಾರೆ ಎನ್ನಲಾಗುತ್ತಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಸದ್ಯಕ್ಕೆ ನಂಬಲಾಗಿದೆ. ಸುಮಾರು 30 ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

- Advertisement -

ಪವರ್ ಸ್ಟೇಶನ್ ಒಳಗೆ ಹೋಗಲು ಅಥವಾ ಹೊರಬರಲು ಒಂದೇ ಒಂದು ದಾರಿಯಿದೆ. ಸುರಂಗದೊಳಗೆ 1 ಕಿ.ಮೀ. ನಮ್ಮ ಜನರು ಹೋಗಬಹುದು. ಇನ್ನೂ 500 ಮೀ. ಹೋಗಬೇಕು. ಸದ್ಯಕ್ಕೆ ಹೊಗೆ ತುಂಬಿಕೊಂಡಿದೆ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -