ಪರೀಕ್ಷೆ ಬರೆದು ಹೊರಬರುತ್ತಿದ್ದ ವಿದ್ಯಾರ್ಥಿನಿಯ ಹಾಡಹಗಲೇ ಗುಂಡಿಕ್ಕಿ ಹತ್ಯೆ
Prasthutha: October 27, 2020

ಬಲ್ಲಬ್ ಗಢ : ಉತ್ತರ ಪ್ರದೇಶದ ರೀತಿಯಲ್ಲೇ ಬಿಜೆಪಿ ಆಡಳಿತದ ಹರ್ಯಾಣದಲ್ಲೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಆತಂಕ ಎದುರಾಗಿದೆ. ಇಲ್ಲಿನ ಬಲ್ಲಬ್ ಗಢದ ಕಾಲೇಜೊಂದರ ಬಳಿ, ಯುವಕನೊಬ್ಬ ಪರೀಕ್ಷೆ ಬರೆದು ಹೊರಬರುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹಾಡಹಗಲೇ ಎಳೆದಾಡಿದುದಲ್ಲದೆ, ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ವರದಿಯಾಗಿದ
ಘಟನೆಗೆ ಸಂಬಂಧಿಸಿ ಒಬ್ಬನನ್ನು ಬಂಧಿಸಲಾಗಿದೆ. ಘಟನೆಯು ಸಿಸಿಟಿವಿ ಕ್ಯಾಮೆರಾ ವೀಡಿಯೊ ತುಣುಕು ಬಹಿರಂಗವಾಗಿದ್ದು, ಯುವಕ ಯುವತಿಯ ಮೇಲೆ ಗುಂಡಿಕ್ಕುವ ದೃಶ್ಯ ಅದರಲ್ಲಿ ದಾಖಲಾಗಿದೆ.
ಕಾಲೇಜು ಗೇಟ್ ಬಳಿ ಐ20 ಬಿಳಿ ಕಾರಿನಲ್ಲಿ ಯುವಕರಿಬ್ಬರು ಬಂದು, ಇಬ್ಬರು ಹುಡುಗಿಯರನ್ನು ಕಾರಿನಲ್ಲಿ ಹೊತ್ತೊಯ್ಯಲು ಯತ್ನಿಸಿದ್ದರು. ಅದರಲ್ಲಿ ಒಬ್ಬಾತ ಒಬ್ಬಾಕೆಯನ್ನು ಕೈಯಲ್ಲಿ ಹಿಡಿದು ಎಳೆದಾಡಿ, ಕಾರಿನೊಳಗೆ ಕೂರಿಸಲು ಯತ್ನಿಸಿದ್ದಾನೆ. ಆದರೆ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯ ಮೇಲೆ ಗುಂಡಿಕ್ಕಿದ್ದಾನೆ. ಅಷ್ಟರಲ್ಲಿ ಇನ್ನೊಬ್ಬ ಓಡಿ ಬಂದು ಗುಂಡಿನ ದಾಳಿ ನಡೆಸಿದಾತನನ್ನು ಹಿಡಿದೆಳೆದುಕೊಂಡು, ಕಾರಿನಲ್ಲಿ ಕೂರಿಸಿಕೊಂಡು ಪರಾರಿಯಾಗುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.
ಮೃತ ಯುವತಿ ಅಗರ್ವಾಲ್ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ನಿಖಿತಾ (21) ಎಂದು ಗುರುತಿಸಲಾಗಿದೆ. ಆಕೆ ಪರೀಕ್ಷೆ ಬರೆದು ಹೊರಬರುತ್ತಿದ್ದಾಗ ಈ ದಾಳಿ ನಡೆದಿದೆ.
ವೀಡಿಯೊಗೆ ಇಲ್ಲಿ ಕ್ಲಿಕ್ ಮಾಡಿ… https://business.facebook.com/watch/?v=1523582434507037
