ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್‌ಗೆ ಮಕ್ಕಳ ಶಾಂತಿ ಪ್ರಶಸ್ತಿ

0
19

ನೆದರ್‌ಲ್ಯಾಂಡ್: ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಮಾಡಿರುವ ಕೆಲಸಕ್ಕಾಗಿ ಸ್ಪೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್‌ಗೆ ಇತ್ತೀಚೆಗೆ ಮಕ್ಕಳ ಶಾಂತಿ ಪ್ರಶಸ್ತಿ ಲಭಿಸಿದೆ.

ತನ್ನ ಪರಿಸರ ಹೋರಾಟದ ಮೂಲಕ ಗ್ರೆಟಾ ಜಗತ್ತಿನಾದ್ಯಂತ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ. ಕ್ಯಾಮರೂನ್‌ನ ಶಾಂತಿ ಕಾರ್ಯಕರ್ತೆ ಡಿವೀನಾ ಮಲೂಮ್(15)ರಿಗೂ ಅಂತರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ನೆದರ್‌ಲ್ಯಾಂಡ್‌ನ  “ಕಿಡ್ಸ್‌ರೈಟ್” ಎಂಬ ಸಂಸ್ಥೆಯು ಈ ಪ್ರಶಸ್ತಿಯನ್ನು 2005ರಿಂದ ಪ್ರತೀ ವರ್ಷ ನೀಡುತ್ತಾ ಬರುತ್ತಿದೆ.

 

 

 

 

 

LEAVE A REPLY

Please enter your comment!
Please enter your name here