ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ ತಂದೆ-ತಾಯಿ ಕೊರೋನಾಗೆ ಬಲಿ

Prasthutha|

ಧಾರವಾಡ: ಮಾರಣಾಂತಿಕ ಕೊರೋನಾದಿಂದ ಜನತೆ ತತ್ತರಿಸಿ ಹೋಗಿದೆ. ಈ ನಡುವೆ ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ ತಂದೆ ಮತ್ತು ತಾಯಿ ಇಬ್ಬರೂ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

- Advertisement -

ಅರುಣ್ ಅವರ ತಾಯಿ ಕಸ್ತೂರಮ್ಮ ಬಡಿಗೇರ ಮೂರು ದಿನಗಳ ಹಿಂದೆ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಇದೀಗ ಅವರ ತಂದೆ 68ವರ್ಷದ ಚಂದ್ರಶೇಖರ ಬಡಿಗೇರ ಕೂಡ ಮೃತಪಟ್ಟಿದ್ದಾರೆ.

ಧಾರವಾಡ ರೈಟರ್ ಗಲ್ಲಿಯ ನಿವಾಸಿಯಾದ ಚಂದ್ರಶೇಖರ ಬಡಿಗೇರ ನಿವೃತ್ತ ಶಿಕ್ಷಕರಾಗಿದ್ದಾರೆ. ಕೊರೊನಾದಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಅಸ್ವಸ್ಥರಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Join Whatsapp