ಪತ್ರಕರ್ತರ ಮೇಲಿನ ಕಿರುಕುಳ ತಡೆಯಿರಿ : ಪ್ರಧಾನಿ ಮೋದಿಗೆ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಮನವಿ

Prasthutha: October 22, 2020

ನವದೆಹಲಿ : ಭಾರತದಲ್ಲಿ ಪತ್ರಕರ್ತರು ಕಿರುಕುಳ ಮತ್ತು ಪ್ರತೀಕಾರದ ಭೀತಿಯಿಲ್ಲದೆ ಮುಕ್ತವಾಗಿ ಸೇವೆ ಸಲ್ಲಿಸಲು ಅವಕಾಶವಾಗುವಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆಗಳು ಮನವಿ ಮಾಡಿವೆ.

ಆಸ್ಟ್ರೀಯಾದಲ್ಲಿ ಕೇಂದ್ರ ಕಚೇರಿಯುಳ್ಳ ಇಂಟರ್ ನ್ಯಾಶನಲ್ ಪ್ರೆಸ್ ಇನ್ಸ್ ಟಿಟ್ಯೂಟ್ ಮತ್ತು ಬೆಲ್ಜಿಯಂ ಮೂಲದ ಇಂಟರ್ ನ್ಯಾಶನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ತಮ್ಮ ಕೆಲಸಕ್ಕಾಗಿ ದೇಶದ್ರೋಹದಂತಹ ಕಠಿಣ ಆರೋಪದ ಪ್ರಕರಣಗಳನ್ನು ಕೈಬಿಡುವಂತೆ ರಾಜ್ಯ ಸರಕಾರಗಳಿಗೆ ಸೂಚಿಸುವಂತೆ ಮನವಿ ಮಾಡಿವೆ.

“ಸ್ವತಂತ್ರ, ವಿಮರ್ಶಾತ್ಮಕ ಪತ್ರಕರ್ತರನ್ನು ಶೋಷಿಸಲು ದೇಶದ್ರೋಹದ ಕಾನೂನುಗಳನ್ನು ಬಳಸುವುದು ದೇಶದ ಅಂತಾರಾಷ್ಟ್ರೀಯ ಬದ್ಧತೆಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಹಾಗೆಯೇ ಯಾವುದೇ ಟೀಕೆಗಳನ್ನು ಹತ್ತಿಕ್ಕುವ ಸರಕಾರದ ಪ್ರಯತ್ನವಾಗಿದೆ. ಪತ್ರಕರ್ತರ ಕೆಲಸಗಳು ದೇಶದ್ರೋಹ ಅಥವಾ ಭದ್ರತೆಗೆ ಧಕ್ಕೆ ತರುವ ಪ್ರಕರಣಗಳಿಗೆ ಸಮಾನಾಗಿಲ್ಲ’’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಲಾಕ್ ಡೌನ್ ವೇಳೆ ಕೋವಿಡ್ ಸೋಂಕು ನಿರ್ವಹಣೆ ಕುರಿತಂತೆ ವರದಿ ಮಾಡಿದ್ದ 55 ಪತ್ರಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬಿಆರ್ ಎಜಿ ವರದಿಯಲ್ಲಿ ಪ್ರಕಟವಾಗಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ