ನ್ಯಾಯಾಂಗ ನಿಂದನೆ ಕೇಸ್ | ವಿಚಾರಣೆ ಮುಂದೂಡುವ ಪ್ರಶಾಂತ್ ಭೂಷಣ್ ಅರ್ಜಿ ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ : ತನ್ನ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಮುಂದೂಡಬೇಕೆಂಬ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಸುಪ್ರೀಂ ಕೋರ್ಟ್ ನ ಮತ್ತೊಂದು ನ್ಯಾಯಪೀಠವು ಶಿಕ್ಷೆಯ ಪ್ರಮಾಣದ ಕುರಿತ ವಾದವನ್ನು ಆಲಿಸಬೇಕು ಎಂದು ಭೂಷಣ್ ವಾದಿಸಿದರು. ದೋಷಿ ಎಂದು ಪರಿಗಣಿಸಲಾದ ಆ.14ರ ತೀರ್ಪಿಗೆ ಸಂಬಂಧಿಸಿ ಭೂಷಣ್ ರ ಮೇಲ್ಮನವಿ ಸಲ್ಲಿಕೆಯಾಗುವವರೆಗೂ ಈ ಅರ್ಜಿ ವಿಚಾರಿಸುವುದಿಲ್ಲ ಎಂದು ಸುಪ್ರೀಂ ಕೊರ್ಟ್ ತಿಳಿಸಿತು.

- Advertisement -

ಪ್ರಶಾಂತ್ ಭೂಷಣ್ ಅವರು ಸುಪ್ರೀಂ ಕೋರ್ಟ್ ಮತ್ತು ಸಿಜೆಐ ಎಸ್ ಎ ಬೊಬ್ಡೆ ವಿರುದ್ಧ ಟ್ವೀಟ್ ಮಾಡುವ ಮೂಲಕ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದಾರೆ. ಪರಿಶೀಲನಾ ಅರ್ಜಿ ಪರಿಶೀಲಿಸುವ ವರೆಗೆ ವಿಚಾರಣೆ ಮುಂದೂಡಬೇಕೆಂದು ಪ್ರಶಾಂತ್ ಭೂಷಣ್ ಕೋರಿದ್ದರು. ಆದರೆ, ಅರ್ಜಿ ಈಗ ತಿರಸ್ಕೃತಗೊಂಡಿದೆ.

- Advertisement -