ನೌಕಾ ವಿಮಾನ ದುರಂತ: ಕೊನೆಗೂ ಪತ್ತೆಯಾದ ಪೈಲಟ್ ಮೃತದೇಹ

Prasthutha|

ನವೆಂಬರ್ 26ರಂದು ಪತನಗೊಂಡಿದ್ದ ಮಿಗ್-29ಕೆ ನೌಕಾ ವಿಮಾನದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಮೃತದೇಹ ಕೊನೆಗೂ ಪತ್ತೆಯಾಗಿದೆ.

ನವೆಂಬರ್ 26ರಂದು ಐಎನ್ಎಸ್ ವಿಕ್ರಮಾದಿತ್ಯ ನೌಕೆಯಿಂದ ಹಾರಿದ್ದ ಮಿಗ್ ವಿಮಾನ ಸಂಜೆ 5 ಗಂಟೆಯ ಹೊತ್ತಿಗೆ ಅರಬ್ಬಿ ಸಮುದ್ರದ ಮೇಲ್ಭಾಗದಲ್ಲಿ ಪತನಗೊಂಡಿತ್ತು. ಇದೀಗ ಬರೋಬ್ಬರಿ 11 ದಿನಗಳ ದೀರ್ಘ ಶೋಧಕಾರ್ಯದ ನಂತರ ಗೋವಾ ಸಮುದ್ರ ತೀರದಿಂದ 30 ಕಿ.ಮೀ ದೂರದಲ್ಲಿ ನಿಶಾಂತ್ ಅವರ ಮೃತದೇಹ ಪತ್ತೆಯಾಗಿದೆ.

- Advertisement -

ನಿಶಾಂತ್ ಜೊತೆಗಿದ್ದ ಸಹ ಪೈಲಟ್ ವಿಮಾನ ಪತನಗೊಳ್ಳುವುದಕ್ಕೂ ಮುಂಚೆ ಸೂಚನೆ ಸಿಕ್ಕಿದ್ದರಿಂದ ಹೊರಗೆ ಹಾರಿದ್ದು, ಪ್ರಾಣಪಾಯದಿಂದ ಪಾರಾಗಿದ್ದರು.

- Advertisement -