ನೀವು ಸುಳ್ಳು ಹೇಳಿ ಅಸಂಬದ್ಧವಾಗಿ ಕೂಗಾಡಿದರೆ ಚಾನೆಲ್ ಮುಚ್ಚಬೇಕಾದೀತು: ಸಲ್ಮಾನ್ ಖಾನ್

Prasthutha: October 12, 2020

ಟಿಆರ್‌ಪಿ ರೇಟಿಂಗ್ ಹಗರಣದ ವಿಚಾರದಲ್ಲಿ ರಿಪಬ್ಲಿಕ್ ನಂತಹ ಚಾನೆಲ್ ಗಳನ್ನು ಸಲ್ಮಾನ್ ಖಾನ್ ಬಲವಾಗಿ ಟೀಕಿಸಿದ್ದಾರೆ. ಸುಳ್ಳು ಹೇಳಿ ಅಸಂಬದ್ಧವಾಗಿ ಕೂಗಾಡಬೇಡಿ. ನೀವು ಈಗ ಮಾಡುತ್ತಿರುವುದನ್ನು ಮುಂದುವರಿಸಿದರೆ ಅಧಿಕಾರಿಗಳು ಚಾನೆಲ್ ಅನ್ನು ಮುಚ್ಚಲಿದ್ದಾರೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಸಲ್ಮಾನ್ ಖಾನ್ ಟಿಆರ್‌ಪಿ ರೇಟಿಂಗ್ ಹಗರಣ ನಡೆಸಿದ ಚಾನೆಲ್ ಗಳನ್ನು ಬಲವಾಗಿ ಟೀಕಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳನ್ನುದ್ದೇಶಿಸಿ ಮಾತನಾಡಿದ ಸಲ್ಮಾನ್ ಖಾನ್, “ಬಿಗ್ ಬಾಸ್ ಆಗಿರಲಿ ಅಥವಾ ಇನ್ನಾವುದೇ ಶೋ ಆಗಿರಲಿ, ನೀವು ಸರಿಯಾದ ರೀತಿಯಲ್ಲಿ ಸ್ಪರ್ಧಿಸಬೇಕು. ರೇಟಿಂಗ್ ಗಾಗಿ ಏನೆನೋ ಮಾಡಬೇಡಿ. ಪ್ರಾಮಾಣಿಕವಾಗಿರಿ. ಸುಳ್ಳು ಹೇಳಿ ಅಸಂಬದ್ಧವಾಗಿ ಕೂಗಾಡಬೇಡಿ. ಅಧಿಕಾರಿಗಳು ನಿಮ್ಮ ಚಾನಲ್ ಅನ್ನು ಮುಚ್ಚಲಿದ್ದಾರೆ ಎಂದು ಹೇಳಿದ್ದಾರೆ.

“ನನಗೆ ಹೇಳಬೇಕಾದದ್ದನ್ನು ನಾನು ಬಹಿರಂಗವಾಗಿ ಹೇಳಿದ್ದೇನೆ” ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಅರ್ನಾಬ್ ಗೋಸ್ವಾಮಿ ಸಲ್ಮಾನ್ ಖಾನ್ ರನ್ನು ಬಿಂಬಿಡದೆ ಹಿಂಬಾಲಿಸಿದ್ದರು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮತ್ತು ಡ್ರಗ್ ಮಾಫಿಯಾ ಸಂಪರ್ಕದ ಬಗ್ಗೆ ನಟರನ್ನು ತನಿಖೆ ನಡೆಸಿದ ವಿಚಾರದಲ್ಲಿ ಸಲ್ಮಾನ್ ಖಾನ್ ಯಾಕೆ ಪ್ರತಿಕ್ರಿಯಿಸುತ್ತಿಲ್ಲ ಎಂಬುದು ಅರ್ನಾಬ್ ರ ಪ್ರಶ್ನೆ. ಸಲ್ಮಾನ್ ಎಲ್ಲಿದ್ದಾರೆ ಎಂದು ಕೇಳುತ್ತಾ ಅರ್ನಾಬ್ ರಿಪಬ್ಲಿಕ್ ಚಾನೆಲ್ ನಲ್ಲಿ ಸುದೀರ್ಘ ಚರ್ಚೆ ನಡೆಸಿದ್ದರು.

ನಂತರ ಅರ್ನಾಬ್ ಹೇಡಿ ಎಂದು ಸಲ್ಮಾನ್ ಅವರ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಅಭಿಯಾನ ಆರಂಭಿಸಿದರು. ಅರ್ನಾಬ್ ಗೆ ರೇಬಿಸ್ ರೋಗಕ್ಕೆ ಚಿಕಿತ್ಸೆ ಬೇಕು. ಅಭಿಯಾನವು (#ArnabNeedsRabiesTreatment)ಎಂಬ ಹ್ಯಾಷ್ ಟ್ಯಾಗ್ ನಲ್ಲಾಗಿತ್ತು. ಈಗ ಸ್ವತಃ ಸಲ್ಮಾನ್ ಅರ್ನಾಬ್ ಗೆ ಬಹಿರಂಗವಾಗಿ ಉತ್ತರ ನೀಡಿದ್ದಾರೆ.

ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್ ಗಳು ಸುಳ್ಳು ರೇಟಿಂಗ್ ಗಳನ್ನು ಹೊಂದಿದ್ದಾರೆ ಎಂದು ಮುಂಬೈ ಪೊಲೀಸರು ಕಂಡುಹಿಡಿದ್ದರು. ರಿಪಬ್ಲಿಕ್ ಟಿವಿಯ ಹೊರತಾಗಿ ಫಕ್ತ್ ಮರಾಟಿ, ಬೋಕ್ಸ್ ಸಿನಿಮಾ ಎಂಬ ಇತರ ಎರಡು  ಚಾನಲ್ ಗಳ ಮೇಲೂ ಈ ಆರೋಪ ಇದೆ.

ಚಾನೆಲ್ ಗಳ ರೇಟಿಂಗ್ ನಿರ್ಧರಿಸುವ ಬಾರ್ಕ್ ಮೀಟರ್ ಅಳವಡಿಸಲಾದ ಮನೆಗಳಿಗೆ ಹೋಗಿ ರಿಪಬ್ಲಿಕ್ ಟಿವಿ ವೀಕ್ಷಿಸಲು ಹಣ ನೀಡುವ ಭರವಸೆ ನೀಡಿದ್ದರು ಎಂದು ಮುಂಬೈ ಪೊಲೀಸ್ ತನಿಖೆಯಿಂದ ಹೊರಬಂದಿದೆ. ರಿಪಬ್ಲಿಕ್ ಟಿವಿ ವೀಕ್ಷಿಸಿದರೆ ತಿಂಗಳಿಗೆ 400 ರೂ ನೀಡುವುದಾಗಿ ಭರವಸೆ ನೀಡಿದ ಸಾಕ್ಷ್ಯ ಹೇಳಿಕೆಯೂ ಬಹಿರಂಗವಾಗಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!