“ನೀವು ಟ್ರಂಪ್ ಗೆ ಮತ ಚಲಾಯಿಸದಿದ್ದರೆ ನಾವು ನಿಮ್ಮನ್ನು ಬಿಡಲಾರೆವು ” : ಮತದಾರರಿಗೆ ಇ-ಮೇಲ್ ಮೂಲಕ ಬೆದರಿಕೆ.

Prasthutha|

ನೀವು ಡೊನಾಲ್ಡ್ ಟ್ರಂಪ್ ಗೆ ಮತ ಚಲಾಯಿಸದಿದ್ದರೆ ನಂತರ ನಡೆಯಲಿರುವ ಪರಿಣಾಮಗಳ ಬಗ್ಗೆ ಇ-ಮೇಲ್ ಬೆದರಿಕೆಯೊಂದು ಪ್ರಸಾರವಾಗುತ್ತಿದೆ. ಫ್ಲೋರಿಡಾ ಮತ್ತು ಪೆನ್ಸಿಲ್ವೇನಿಯಾ ಸೇರಿದಂತೆ ಸ್ಥಳಗಳಲ್ಲಿನ ಡೆಮಾಕ್ರಟಿಕ್ ಮತದಾರರಿಗೆ ಇಂತಹಾ ಬೆದರಿಕೆ ಇ-ಮೇಲ್ ಗಳು ಬಂದಿದೆ.

- Advertisement -

ಟ್ರಂಪ್ ಗೆ ಮತ ಚಲಾಯಿಸದಿದ್ದರೆ ಪರಿಣಾಮ ಏನಾಗಲಿದೆಯೆಂದು ತೋರಿಸಿಕೊಡಲಿದ್ದೇವೆ ಮತ್ತು ನಿಮ್ಮ ಬೆನ್ನ ಹಿಂದೆ ಬಂದು ಕಿರುಕುಳ ನೀಡಲಿದ್ದೇವೆ ಎಂದು ಮತದಾರರಿಗೆ ಬೆದರಿಕೆ ಹಾಕಲಾಗಿದೆ. ಪ್ರೌಡ್ ಬಾಯ್ಸ್ ಎಂಬ ಪ್ರಬಲ ಬಲಪಂಥೀಯ ಗುಂಪಿನವರು ಎಂದು ಹೇಳಿಕೊಂಡು ಇ-ಮೇಲ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮತ ಚಲಾಯಿಸದಿದ್ದರೆ “ನಾವು ನಿಮ್ಮನ್ನು ಬಿಡಲಾರೆವು” ಎಂದು ಎಚ್ಚರಿಸಲಾಗಿದೆ.

“ಇಂತಹಾ ಬೆದರಿಕೆಗಳು ಅಮೇರಿಕಾದ ಮತದಾರರ ವಿಶ್ವಾಸವನ್ನು ಬೆದರಿಸುವ ಮತ್ತು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿದೆ” ಎಂದು ಗೃಹ ಭದ್ರತಾ ಇಲಾಖೆಯ ಉನ್ನತ ಚುನಾವಣಾ ಭದ್ರತಾ ಅಧಿಕಾರಿ ಕ್ರಿಸ್ಟೋಫರ್ ಕ್ರೆಬ್ಸ್ ಮಂಗಳವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

- Advertisement -