ನೀಟ್ ಫಲಿತಾಂಶ | ಬೀದರ್ ನ ಶಾಹೀನ್ ಕಾಲೇಜು ವಿದ್ಯಾರ್ಥಿಗಳ ಅದ್ಭುತ ಸಾಧನೆ | ಕಾರ್ತಿಕ್ ರೆಡ್ಡಿ ರಾಜ್ಯಕ್ಕೆ ಪ್ರಥಮ, ಅರ್ಬಾಜ್ ಅಹ್ಮದ್ ತೃತೀಯ

Prasthutha|

►► ಸಿಎಎ ವಿರೋಧಿ ನಾಟಕಕ್ಕೆ ದೇಶದ್ರೋಹ ಪ್ರಕರಣ ಎದುರಿಸಿದ್ದ ಶಿಕ್ಷಣ ಸಂಸ್ಥೆ

ಬೀದರ್ : ವೈದ್ಯಕೀಯ ಪ್ರವೇಶ ಪರೀಕ್ಷೆ ಎನ್ ಇಇಟಿ (ನೀಟ್)ಯಲ್ಲಿ ಬೀದರ್ ನ ಶಾಹೀನ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹತ್ವದ ಸಾಧನೆ ಸಾಧಿಸಿದ. ಶಾಹೀನ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ರೆಡ್ಡಿ 720ರಲ್ಲಿ 710 ಅಂಕಗಳನ್ನು ಗಳಿಸುವ ಮೂಲಕ ದೇಶಕ್ಕೆ 9ನೇ ಮತ್ತು ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದಾನೆ. ಮತ್ತೋರ್ವ ವಿದ್ಯಾರ್ಥಿ ಎಂ.ಡಿ. ಅರ್ಬಾಜ್ ಅಹಮ್ಮದ್ 700 ಅಂಕಗಳನ್ನು ಪಡೆದು, ದೇಶಕ್ಕೆ 85ನೇ ಸ್ಥಾನ ಗಳಿಸಿದ್ದಾನೆ ಮತ್ತು ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದಿದ್ದಾನೆ.     

- Advertisement -

ಶಾಹೀನ್ ಕಾಲೇಜು ಈ ಹಿಂದೆಯೂ ಸಿಇಟಿ ಮತ್ತು ನೀಟ್ ನಲ್ಲಿ ಮಹತ್ವದ ಸಾಧನೆ ಸಾಧಿಸಿತ್ತು. ಕಾಲೇಜಿನಲ್ಲಿ ಪ್ರಥಮ ವರ್ಷದಿಂದಲೇ ಸಿಇಟಿ ಮತ್ತು ನೀಟ್ ಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಕನಸನ್ನು ನನಸಾಗಿಸಲು ಶಾಹೀನ್ ಕಾಲೇಜು ಅತ್ಯುತ್ತವ ಅವಕಾಶವನ್ನು ಒದಗಿಸಿಕೊಡುತ್ತಿದೆ. ಕಳೆದ ವರ್ಷ 327 ಉಚಿತ ಸರಕಾರಿ ವೈದ್ಯಕೀಯ ಸೀಟುಗಳನ್ನು ಶಾಹೀನ್ ಕಾಲೇಜು ಪಡೆದಿತ್ತು. ಈ ವರ್ಷ ಆ ಸಂಖ್ಯೆ 400ಕ್ಕೂ ಹೆಚ್ಚು ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸಿಎಎ ವಿರೋಧಿ ನಾಟಕಕ್ಕೆ ದೇಶದ್ರೋಹ ಪ್ರಕರಣ ಎದುರಿಸಿದ್ದ ಶಿಕ್ಷಣ ಸಂಸ್ಥೆ :

ಶಾಹೀನ್ ಶಿಕ್ಷಣ ಸಂಸ್ಥೆ ಈ ವರ್ಷದ ಆರಂಭದಲ್ಲಿ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಭಾರಿ ಸುದ್ದಿ ಮಾಡಿತ್ತು. ಸಿಎಎ ವಿರೋಧಿ ನಾಟಕ ಮಾಡಿದರೆಂಬ ಕ್ಷುಲ್ಲಕ ಕಾರಣಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ನಾಟಕದಲ್ಲಿ ಭಾಗವಹಿಸಿದ್ದ ಮಗುವಿನ ತಾಯಿಯನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಹಲವರ ಮೇಲೆ ಎಫ್ ಐಆರ್ ದಾಖಲಾಗಿತ್ತು. ಪೊಲೀಸರು ಚಿಕ್ಕಮಕ್ಕಳನ್ನು ವಿಚಾರಣೆಗೆ ಗುರಿಪಡಿಸಿದ್ದರು. ಸಂಸ್ಥೆಯ ವಿರುದ್ಧ ಭಾರಿ ಅಪಪ್ರಚಾರಗಳು ನಡೆದಿದ್ದವು. ಹಲವಾರು ಮಂದಿ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಬೇರೆಡೆಗೆ ವರ್ಗಾಯಿಸುವಂತ ಕಾರ್ಯಗಳೂ ನಡೆದಿದ್ದವು. ಆದರೆ, ಈ ಸಂಸ್ಥೆ ಸಾವಿರಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಇದು ಕೇವಲ ಮುಸ್ಲಿಂ ವಿದ್ಯಾರ್ಥಿಗಳು ಕಲಿಯುತ್ತಿರುವ ವಿದ್ಯಾ ಸಂಸ್ಥೆಯಲ್ಲ. ಇಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳು ಇತರ ಸಮುದಾಯಗಳಿಗೆ ಸೇರಿದವರು. ಕಳೆದ 5 ವರ್ಷಗಳಲ್ಲಿ 1,200ಕ್ಕೂ ಹೆಚ್ಚು ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳು ಉಚಿತ ವೈದ್ಯಕೀಯ ಸೀಟು ಪಡೆದಿದ್ದಾರೆ.   

- Advertisement -