ನಿರಾಶ್ರಿತರಿಗೆ ಉಚಿತ ಆಹಾರ ನೀಡುತ್ತಿರುವ ಮಂಗಳೂರಿನ ‘ದಿ ಇಂಪ್ಯಾರ್ ರೆಸ್ಟೋರೆಂಟ್’

Prasthutha|

ಮಂಗಳೂರು: ಕೋವಿಡ್ ಎರಡನೇ ಅಲೆಗೆ ಇಡೀ ದೇಶವೇ ತತ್ತರಿಸಿದ್ದು ದೇಶದ ಹಲವು ರಾಜ್ಯಗಳು ಈಗಾಗಲೇ ಸಂಪೂರ್ಣ ಲಾಕ್ ಡೌನ್ ಜಾರಿಮಾಡಿದೆ. ಜನಸಾಮಾನ್ಯರು ಆಹಾರಕ್ಕಾಗಿ ಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಅದರಲ್ಲೂ ನಿರಾಶ್ರಿತರಿಗಾಗಿ ಪ್ರತಿದಿನ ಉಚಿತ ಆಹಾರವನ್ನು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿರುವ ನಗರದ ರಾವ್‌ & ರಾವ್‌ ಸರ್ಕಲ್‌ ನಲ್ಲಿರುವ ‘ದಿ ಇಂಪ್ಯಾರ್ ಫ್ಯಾಮಿಲಿ ರೆಸ್ಟೋರೆಂಟ್‌’ ಸುದ್ದಿಯಲ್ಲಿದೆ.

ರಂಜಾನ್ ತಿಂಗಳ ಉಪವಾಸದ ಇಫ್ತಾರ್‌ ಸಮಯದಲ್ಲಿ ಉಚಿತ ಇಫ್ತಾರ್‌ ಕೂಟವನ್ನು ಏರ್ಪಡಿಸಲಾಗಿದೆ. ದಿನದ 24 ಗಂಟೆಯಲ್ಲಿ ಈ ಹೋಟೆಲ್‌ ನಲ್ಲಿ ಉಚಿತ ಆಹಾರ ಮತ್ತು ಗ್ರಾಹಕರಿಗೆ ಪಾರ್ಸೆಲ್‌ ವ್ಯವಸ್ಥೆಯು ಇದೆ.ಹಾಗೂ ನಗರದಲ್ಲಿರುವ ಎಲ್ಲಾ ಆಸ್ಪತ್ರೆಗೆ ಊಟದ ವ್ಯವಸ್ಥೆಯನ್ನು ದಿನದ 24 ಗಂಟೆಗಳು ಸೇವೆಯನ್ನು ಮಾಡುತ್ತಾ ಬಂದಿದೆ.

- Advertisement -

ದಿ ಇಂಪ್ಯಾರ್ ಫ್ಯಾಮಿಲಿ ರೆಸ್ಟೋರೆಂಟ್‌ ನ ಮಾಲಕರು ಕೋವಿಡ್ ಲಾಕ್‌ ಡೌನ್‌ ನಂತಹ ಸಮಯದಲ್ಲಿ ನೀರಾಶ್ರಿತರಿಗೆ ಉಚಿತ ಊಟದ ವ್ಯವಸ್ಥೆ ಏರ್ಪಡಿಸಿ, ಜನರ ಕಷ್ಟಕ್ಕೆ ತಮ್ಮದೇ ಆದ ರೀತಿಯಲ್ಲಿ ನೆರವಾಗುತ್ತಾ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

- Advertisement -