ನಿಮ್ಮ ಹಾಗೆ ನಕಲಿ ಕೋವಿಡ್-19 ಪರೀಕ್ಷೆಗಳನ್ನು ನಾವು ಮಾಡುವುದಿಲ್ಲ: ಯೋಗಿ ವಿರುದ್ಧ ವ್ಯಂಗ್ಯವಾಡಿದ ಕೇಜ್ರಿವಾಲ್

Prasthutha|

“ಕೋವಿಡ್ -19 ಬಿಕ್ಕಟ್ಟನ್ನು ಎದುರಿಸಲು ದೆಹಲಿ ಮಾಡಿದ ಕಾರ್ಯಗಳನ್ನು ಉತ್ತರ ಪ್ರದೇಶದ ಬೀದಿ ಬೀದಿಗಳಲ್ಲಿ ಚರ್ಚಿಸಲಾಗುತ್ತಿದೆ. ನಿಮ್ಮ ಹಾಗೆ ನಕಲಿ ಕೋವಿಡ್-19 ಪರೀಕ್ಷೆಗಳನ್ನು ನಾವು ಮಾಡುವುದಿಲ್ಲ” ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಯುಪಿ ಮುಖ್ಯಮಂತ್ರಿ ಯೋಗಿ ಆದಿಥ್ಯನಾತ್ ನ ವಿರುದ್ಧ ಟೀಕೆ ಮಾಡಿದ್ದಾರೆ.

ಯೋಗಿ ಆದಿಥ್ಯನಾತ್ ಅವರಿಗೆ ಮಲಗಿದ್ದಾಗಲೂ, ಎದ್ದಾಗಲೂ ದಿಲ್ಲಿ ಸರಕಾರ ಮತ್ತು ಆಮ್ ಆದ್ಮಿ ಪಾರ್ಟಿ ಮಾತ್ರ ಕಾಣುತ್ತದೆ ಎಂದು ಕಿಡಿಕಾರಿದ್ದಾರೆ.

- Advertisement -

ಬರೇಲಿಯಲ್ಲಿ ಹೆಚ್ಚಿದ ಕೋವಿಡ್ -19 ಪರೀಕ್ಷೆಯನ್ನು ತೋರಿಸಲು ನಕಲಿ ಹೆಸರುಗಳನ್ನು ನೋಂದಾಯಿಸಲಾಗುತ್ತಿದೆ. ಒಂದೇ ಮೊಬೈಲ್ ಸಂಖ್ಯೆಯ ಅಡಿಯಲ್ಲಿ 965 ಜನರನ್ನು ನೋಂದಾಯಿಸಲಾಗಿದೆ ಎಂದು ಕೇಜ್ರಿವಾಲ್ ಮಾಧ್ಯಮ ವರದಿಯಲ್ಲಿ ಹೇಳಿದ್ದಾರೆ.

ಏತನ್ಮಧ್ಯೆ, ಯುಪಿಯಲ್ಲಿ ಅತಿ ಹೆಚ್ಚು ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯವು ಕನಿಷ್ಟ ಪಾಸಿಟಿವಿಟಿ ಪ್ರಮಾಣ ಮತ್ತು ಕಡಿಮೆ ಮರಣ ಪ್ರಮಾಣವನ್ನು ಹೊಂದಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

- Advertisement -