ನಿಮ್ಮ ವಾಟ್ಸಪ್ ವೆಬ್ ನಲ್ಲಿ ಡಾರ್ಕ್ ಮೋಡ್ ಬೇಕಾ? ಹೀಗೆ ಮಾಡಿ… ಇಲ್ಲಿದೆ ಮಾಹಿತಿ

Prasthutha|

ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ವೆಬ್ ಬಳಕೆದಾರರ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚುತ್ತಿದೆ. ವಾಟ್ಸಪ್ ವೆಬ್ ತಮ್ಮ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಅಥವಾ ಐಪ್ಯಾಡ್ ನಲ್ಲೇ ವಾಟ್ಸಪ್ ಓಪನ್ ಮಾಡಿ, ತಮ್ಮ ಆನ್ ಲೈನ್ ಸಂವಹನ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭವಾಗಿಸುತ್ತದೆ. ಹೀಗೆ ದಿನಗಟ್ಟಲೆ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವವರಿಗೆ ವಾಟ್ಸಪ್ ವೆಬ್ ಬಳಕೆ ವೇಳೆ ಕಣ್ಣಿಗೆ ಹೆಚ್ಚು ಆಯಾಸ ಆಗದಂತೆ ಮಾಡಲು ವಾಟ್ಸಪ್ ವೆಬ್ ಈಗ ಡಾರ್ಕ್ ಮೋಡ್ ವ್ಯವಸ್ಥೆಯನ್ನು ಅಧಿಕೃತವಾಗಿ ಅಳವಡಿಸಿದೆ. ವಾಟ್ಸಪ್ ವೆಬ್ ಡಾರ್ಕ್ ಮೋಡ್ ಬಳಸಲು ಇಚ್ಛಿಸುವವರು ಈ ಕೆಳಗಿನ ವಿಧಾನವನ್ನು ಬಳಸಬಹುದು.

  1. ನಿಮ್ಮ ಡೆಸ್ಕ್ ಟಾಪ್/ಲ್ಯಾಪ್ ಟಾಪ್ ನಲ್ಲಿ ವಾಟ್ಸಪ್ ವೆಬ್ ಟೈಪ್ ಮಾಡಿ, ಕ್ಯುಆರ್ ಕೋಡ್ ಮೂಲಕ ಲಾಗ್ ಇನ್ ಆಗಿ. ಅದನ್ನು ಮಾಡಲು, ಮೊದಲು ನೀವು ನಿಮ್ಮ ಕಂಪ್ಯೂಟರ್ ನಲ್ಲಿ ಗೂಗಲ್ ಸರ್ಚ್ ಮೂಲಕ ವಾಟ್ಸಪ್ ವೆಬ್ ಟೈಪ್ ಮಾಡಿ, ಅದರ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ಅಲ್ಲೊಂದು ಕ್ಯುಆರ್ ಕೋಡ್ ಲಭ್ಯವಾಗುತ್ತದೆ. ನಂತರ ನಿಮ್ಮ ಆ್ಯಂಡ್ರಾಯ್ಡ್ ಫೋನ್ ನಲ್ಲಿ ವಾಟ್ಸಪ್ ಓಪನ್ ಮಾಡಿ, ಅದರಲ್ಲಿನ ಬಲಭಾಗದಲ್ಲಿ ಮೇಲಿನ ಮೂರು ಚುಕ್ಕೆಗಳನ್ನು ಒತ್ತಿ, ಆಗ ಅಲ್ಲಿ ವಾಟ್ಸಪ್ ವೆಬ್ ಆಪ್ಶನ್ ದೊರೆಯುತ್ತದೆ. ಐಫೋನ್ ಗಳಲ್ಲಿ ವಾಟ್ಸಪ್ ಓಪನ್ ಮಾಡಿ, ಅದರಲ್ಲಿ ಸೆಟ್ಟಿಂಗ್ಸ್ ಹೋಗಿ, ವಾಟ್ಸಪ್ ವೆಬ್ ಆಯ್ಕೆ ಮಾಡಿಕೊಳ್ಳಿ. ಈಗ ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಮೇಲಿರುವ ವಾಟ್ಸಪ್ ವೆಬ್ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.
  2. ಆಗ ನಿಮ್ಮ ಕಂಪ್ಯೂಟರ್ ನಲ್ಲಿ ವಾಟ್ಸಪ್ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಇತ್ತೀಚಿನ ಚ್ಯಾಟ್ ಗಳ ಮೇಲೆ ಮೂರು ಚುಕ್ಕೆಗಳಿವೆ. ಆ ಚುಕ್ಕೆಗಳನ್ನು ಒತ್ತಿ, ಅದರಲ್ಲಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ
  3. ಈಗ ಅಲ್ಲಿ ಡಾರ್ಕ್ ಮೋಡ್ ಆಯ್ಕೆ ಮಾಡಿ ಕ್ಲಿಕ್ ಮಾಡಿ
  4. ಇಷ್ಟೇ ಇರುವುದು, ಈಗ ನಿಮ್ಮ ವಾಟ್ಸಪ್ ವೆಬ್ ಡಾರ್ಕ್ ಮೋಡ್ ಗೆ ಬದಲಾಗಿರುತ್ತದೆ.
- Advertisement -