ನಿತೀಶ್ ಕುಮಾರ್ ಸಿಎಂ ಆದಾಗಲೆಲ್ಲಾ ಬೆರಳನ್ನು ‘ತ್ಯಾಗ’ ಮಾಡುತ್ತಿದ್ದ ಅಲಿಯಾಸ್ ಅಲಿ

Prasthutha|

ಪಾಟ್ನಾ: ಬಿಹಾರದಲ್ಲಿ ಎನ್‌.ಡಿ.ಎ ಸರ್ಕಾರ ರಚನೆಯಾದ ನಂತರ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ಬೆಂಬಲಿಗರಾದ ವೈನಾ ಗ್ರಾಮದ ನಿವಾಸಿ ಅನಿಲ್ ಶರ್ಮಾ ಅಲಿಯಾಸ್ ಅಲಿ ಬಾಬಾ(44) ತನ್ನ ನಾಲ್ಕನೇ ಬೆರಳನ್ನು ತ್ಯಾಗ ಮಾಡಿರುವ ಘಟನೆ ನಡೆದಿದೆ.

ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಗಲೆಲ್ಲ ಅಂದರೆ ಸುಮಾರು 15 ವರ್ಷಗಳಿಂದ ಈ ವಿಲಕ್ಷಣ ಆಚರಣೆಯನ್ನು ಅಲಿ ಬಾಬಾ ನಡೆಸುತ್ತಿದ್ದಾರೆ.

- Advertisement -

ಯಾತಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದಾಗ, “ನಿತೀಶ್ ಕುಮಾರ್ ಅವರ ವಿಜಯವನ್ನು ಆಚರಿಸಲು ನನ್ನದೇ ಆದ ಮಾರ್ಗವಿದೆ. ನಾನು ಅವರ ದೊಡ್ಡ ಅಭಿಮಾನಿ. ಸಿಎಂ ನನ್ನನ್ನು ಭೇಟಿಯಾಗಲು ಬರುವುದಿಲ್ಲ ಎಂದು ನನಗೆ ತಿಳಿದಿತ್ತು, ಆದರೂ ಅವರ ಬಗ್ಗೆ ನನ್ನ ಗೌರವ ಕಡಿಮೆಯಾಗುವುದಿಲ್ಲ”ಎಂದು ಅವರು ಉತ್ತರಿಸಿದ್ದಾರೆ.

ಅಲಿ ಅವರ ನಾಲ್ಕನೇ ಬೆರಳಿನ ತ್ಯಾಗದ ಸುದ್ದಿ ಸಾರ್ವಜನಿಕವಾಗುತ್ತಿದ್ದಂತೆ, ಸಹ ಗ್ರಾಮಸ್ಥರು ಮತ್ತು ಮಾಧ್ಯಮಗಳು ಮಂಗಳವಾರ ಅವರ ಮನೆಯಲ್ಲಿ ಜಮಾಯಿಸಿದರು. ಶರ್ಮಾ ಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

- Advertisement -