ನಾಳೆ ‘TRP’ ಸುದ್ದಿ ಕೊಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ ಯತ್ನಾಳ್
Prasthutha: March 1, 2021

ಬೆಂಗಳೂರು : ನಾಳೆ ಟಿ ಆರ್ ಪಿ ಸುದ್ದಿ ಕೊಡುತ್ತೇನೆ, ನಾನು ಕೇಂದ್ರದ ಮಂತ್ರಿ ಆಗಿದ್ದಾಗ ಯಾರ್ಯಾರು ಕಾಲು ಹಿಡಿದಿದ್ದರು ಎಂದು ಎಲ್ಲವನ್ನು ಹೇಳುತ್ತೇನೆ, ನನ್ನ ರಾಜಕೀಯ ಜೀವನ ಮುಗಿಸೋಕೆ ಯಾರಿಂದಲೂ ಸಾಧ್ಯವಿಲ್ಲ, ಯತ್ನಾಳ್ ಗೌಡ ಹೆದರುವ ಮಗನೇ ಅಲ್ಲ, ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಾಗ್ಧಾಳಿ ನಡೆಸಿದ್ದಾರೆ.
ಹಾಲು ಮತದಾರರು ಹಿಂದೂಗಳು ಅಲ್ವೇ..? ವಾಲ್ಮೀಕಿ ಸಮುದಾಯದವರು ಹಿಂದೂಗಳು ಅಲ್ವೇ..? ಎಲ್ಲರೂ ಹಿಂದುಗಳು, ಅಲ್ಲಿ ಬಡವರು ಇಲ್ಲವೇ? ನಾನು ಕೊನೇ ತನಕ ಈ ಹೋರಾಟದಲ್ಲಿ ಇರುತ್ತೇನೆ ಎಂದು ಪಂಚಮಸಾಲಿಗೆ 2 ಎ ಮೀಸಲಾತಿ ಕೋರಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಇಂದು ಬಸವನಗೌಡ ಪಾಟೀಲ್ ಬಿಜೆಪಿ ನಾಯಕರ ವಿರುದ್ಧ ಕ್ರೋಶ ವ್ಯಕ್ತಪಡಿಸಿದ್ದಾರೆ.
