ನಮ್ಮ ಕಷ್ಟಕಾಲದಲ್ಲಿ ಬಿಜೆಪಿಯವರು ಬರಲಿಲ್ಲ: ಎಚ್.ವಿಶ್ವನಾಥ್

Prasthutha|

ಬೆಂಗಳೂರು: “ನಮ್ಮಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚನೆಯಾಯಿತು. ಆದರೆ ನಮ್ಮ ಕಷ್ಟಕಾಲದಲ್ಲಿ ಅವರು (ಬಿಜೆಪಿಯವರು) ಬರಲಿಲ್ಲ. ಎಲ್ಲವನ್ನೂ ಎದುರಿಸಿ ನಿಲ್ಲುತ್ತೇನೆ. ನಲ್ವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲವನ್ನೂ ಎದುರಿಸಿದ್ದೇನೆ” ಎಂದು ಎಚ್.ವಿಶ್ವನಾಥ್ ಹೇಳಿದ್ದಾರೆ. ಸಚಿವರಾಗುವ ಅರ್ಹತೆಯಿಲ್ಲ ಎಂದು ಹೈಕೋರ್ಟ್ ನೀಡಿದ ತೀರ್ಪಿನ ಬಳಿಕ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

“ವಿಧಾನ ಪರಿಷತ್ ಆಯ್ಕೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ನಾಲ್ವರ ಹೆಸರನ್ನು ಹೈಕಮಾಂಡ್ ಗೆ ಜೂನ್ ತಿಂಗಳಲ್ಲಿ ಕಳುಹಿಸಿತ್ತು. ಪಟ್ಟಿಯಲ್ಲಿ ನನ್ನ ಹೆಸರು ಕೈಬಿಟ್ಟು ಉಳಿದವರನ್ನು ಹೈಕಮಾಂಡ್ ಆಯ್ಕೆ ಮಾಡಿತ್ತು. ಬಿಜೆಪಿಯನ್ನು ಈ ಕುರಿತು ಕೇಳಿದಾಗ ನನ್ನನ್ನು ನಾಮನಿರ್ದೇಶಿಸುವುದಾಗಿ ಹೇಳಿತ್ತು. ಪರಿಷತ್ ಚುನಾವಣೆ ವೇಳೆ ನನ್ನ ಹೆಸರನ್ನು ಯಾಕೆ ತೆಗೆದರು ಎಂದು ತಿಳಿದಿಲ್ಲ. ರಾಜ್ಯದ ಜನತೆ ತಿಳಿಯಬೇಕೆಂದು ಹೇಳುತ್ತಿದ್ದೇನೆ” ಎಂದು ಅವರು ಪತ್ರಕರ್ತರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

- Advertisement -

“ನನ್ನ ಬಗ್ಗೆ ಅಡ್ವೊಕೇಟ್ ಜನರಲ್ ಗೆ ನಿರ್ಲಕ್ಷ್ಯ ಯಾಕೆ ಗೊತ್ತಿಲ್ಲ. ಅಡ್ವೊಕೇಟ್ ಜನರಲ್ ನನ್ನ ಜೊತೆ ಮಾತಾಡಲಿಲ್ಲ. ನಾಮನಿರ್ದೇಶನ ಬಗ್ಗೆ ಸ್ಪಷ್ಟವಾಗಿ ಹೇಳಲಿಲ್ಲ” ಎಂದು ಅಡ್ವೊಕೇಟ್ ಜನರಲ್ ವಿರುದ್ಧವೂ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -