‘ನಮಕ್ ಹರಾಮ್’ ಎಂದ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ ಕಂಗಣಾ

Prasthutha|

ಮುಂಬೈ : ತನ್ನನ್ನು `ನಮಕ್ ಹರಾಮ್’ ಎಂದು ಕರೆದಿರುವ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕಂಗಣಾ ಸಿಡಿಮಿಡಿಗೊಂಡಿದ್ದಾರೆ. ಇದೀಗ ಸರಣಿ ಟ್ವೀಟ್ ಗಳ ಮುಖಾಂತರ ಉದ್ಧವ್ ವಿರುದ್ಧ ಕಾಲೆಳೆಯುವ ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ.

`ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ ಎಂದು ಕೆಲವರು ಮುಂಬೈ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಠಾಕ್ರೆ ಕಂಗಣಾ ವಿರುದ್ಧ ಆಕೆಯ ಹೆಸರು ಎತ್ತದೇ ಭಾನುವಾರ ಆರೋಪಿಸಿದ್ದರು.

- Advertisement -

“ತಮ್ಮ ತವರಿನಲ್ಲಿ ಜೀವನೋಪಾಯವಿಲ್ಲದವರು ಮುಂಬೈಗೆ ಬರುತ್ತಾರೆ ಮತ್ತು ಅದನ್ನು ವಂಚಿಸುತ್ತಾರೆ. ಮುಂಬೈಯನ್ನು ಪಿಒಕೆ ಎಂದು ಕರೆಯಲಾಗುತ್ತಿರುವುದು ವಾಸ್ತವದಲ್ಲಿ ಪ್ರಧಾನಿ ನರೇಂದ್ರ ಮೋದಿಯ ವೈಫಲ್ಯವಾಗಿದೆ. ಪಿಒಕೆಯನ್ನು ಭಾರತಕ್ಕೆ ಮರಳಿ ತರುತ್ತೇನೆ ಎಂದು ಅವರು ಹೇಳಿದ್ದರು” ಎಂದು ಠಾಕ್ರೆ ಭಾನುವಾರದಂದು ಟೀಕಿಸಿದ್ದರು.

`ನನನ್ನು ನಮಕ್ ಹರಮ್ ಎಂದು ಕರೆದಿದ್ದಲ್ಲದೇ, ಮುಂದುವರಿದು ಮುಂಬೈ ನನಗೆ ಆಶ್ರಯ ನೀಡದಿದ್ದರೆ ನನ್ನ ರಾಜ್ಯದಲ್ಲಿ ನನಗೆ ಊಟ ದೊರೆಯುತ್ತಿರಲಿಲ್ಲ ಎಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ನಾಚಿಕೆಯಾಗಬೇಕು. ನಿಮ್ಮ ಮಗನ ಪ್ರಾಯದ ಒಂಟಿ ಮಹಿಳೆಯೊಂದಿಗೆ ಹೀಗೆಲ್ಲಾ ಮಾತನಾಡುವ ನೀವು ಸ್ವಜನಪಕ್ಷಪಾತದ ಕೆಟ್ಟ ಉತ್ಪನ್ನ’ ಎಂದು ಆಕೆ ಟೀಕಿಸಿದ್ದಾರೆ.

- Advertisement -