“ನನಗೆ ಮತ ನೀಡಿ, ನಾನು ವ್ಯಾಕ್ಸಿನ್ ನೀಡುತ್ತೇನೆ” : ಬಿಜೆಪಿಯ ಪ್ರಣಾಳಿಕೆಯನ್ನು ಅಪಹಾಸ್ಯ ಮಾಡಿದ ಶಿವಸೇನೆಯ ಮುಖಂಡ ಸಂಜಯ್ ರಾವತ್

Prasthutha|


ಮುಂಬೈ : ಬಿಹಾರ ಚುನಾವಣೆಗೆ ಸಂಬಂಧಿಸಿದ ಪ್ರಣಾಳಿಕೆಯಲ್ಲಿ ಉಚಿತ ಕೋವಿಡ್ ಲಸಿಕೆ ಸೇರಿಸಿದ್ದಕ್ಕಾಗಿ ಶಿವಸೇನೆ ಮುಖಂಡ ಸಂಜಯ್ ರಾವತ್ ಬಿಜೆಪಿಯನ್ನು ಅಪಹಾಸ್ಯ ಮಾಡಿದ್ದಾರೆ. ಮೊದಲು ‘ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ’ ಎಂದು ಹೇಳಲಾಗುತ್ತಿತ್ತು. ಈಗ ಬಿಜೆಪಿ ಅದನ್ನು ‘ನನಗೆ ಮತ ನೀಡಿ, ನಾನು ನಿಮಗೆ ವ್ಯಾಕ್ಸಿನ್ ನೀಡುತ್ತೇನೆ’ ಎಂದು ಬದಲಾಯಿಸಿದೆ ಎಂದು ಅಪಹಾಸ್ಯ ಮಾಡಿದ್ದಾರೆ.
ಶಿವಸೇನೆ ಬಿಹಾರದಲ್ಲಿ 50 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಸಂಜಯ್ ರಾವತ್ ಅಲ್ಲದೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯೂ ಕೂಡಾ ಅಪಹಾಸ್ಯ ಮಾಡಿದ್ದಾರೆ. ಕೇಂದ್ರ ಸರಕಾರ ಕೋವಿಡ್ ನಿಯಮಗಳನ್ನು ಬಿಡುಗಡೆ ಮಾಡಿದೆ. ಹೆಚ್ಚಿನದನ್ನು ತಿಳಿದುಕೊಳ್ಳಲು ಬಯಸುವವರು ಚುನಾವಣಾ ಪ್ರಣಾಳಿಕೆಯನ್ನು ನೋಡಬಹುದು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಬಿಹಾರದಲ್ಲಿ ಉಚಿತ ಲಸಿಕೆ ಘೋಷಿಸುವುದರೊಂದಿಗೆ ತಮಿಳುನಾಡು, ಮಧ್ಯಪ್ರದೇಶ ಸರಕಾರಗಳು ಸಹ ಉಚಿತ ಲಸಿಕೆ ಘೋಷಿಸಿದೆ.