November 26, 2020

ನಕಲು ಮಾಡಲು ಬುದ್ಧಿವಂತಿಕೆಯ ಅಗತ್ಯವಿದೆ| ಬಿಜೆಪಿಯನ್ನು ಕೆಣಕಿದ ಕೆಟಿಆರ್

ಕೆ.ಟಿ.ರಾಮರಾವ್ (ಕೆಟಿಆರ್) ಅವರು, ಟಿ.ಆರ್.ಎಸ್ ಸರ್ಕಾರ ಮಾಡಿದ ಕೆಲಸ ಕಾರ್ಯಗಳ ಚಿತ್ರಗಳನ್ನು ಆಯ್ಕೆ ಮಾಡಿದ್ದಕ್ಕಾಗಿ ಬಿಜೆಪಿಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿ.ಹೆಚ್.ಎಂ.ಸಿ) ಚುನಾವಣೆಗೆ ಬಿಜೆಪಿ ತನ್ನ ಮತದಾನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ ಕೆ.ಟಿ.ಆರ್ ಅವರ ಹೇಳಿಕೆಗಳು ಬಂದವು.

ಟಿ.ಆರ್.ಎಸ್ ನ ಕಾರ್ಯಕಾರಿ ಅಧ್ಯಕ್ಷರಾದ ಕೆಟಿಆರ್, ಜನಪ್ರಿಯ ಹಿಂದಿ ನಾಣ್ಣುಡಿ “ನಕಲ್ ಕರ್ನೆ ಕೋ ಭಿ ಅಕಲ್ ಚಾಹಿಯೆ” ಅಂದರೆ ನಕಲು ಮಾಡಲು ಕೂಡ ಬುದ್ಧಿವಂತಿಕೆಯ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದಾರೆ.

“ಆತ್ಮೀಯ ಬಿಜೆಪಿ ಪ್ರಣಾಳಿಕೆ ಬರಹಗಾರರೇ, ನಿಮ್ಮ ಜಿ.ಎಚ್.‌ಎಂ.ಸಿ ಪ್ರಣಾಳಿಕೆಯಲ್ಲಿ ಟಿ.ಆರ್‌.ಎಸ್ ಸರ್ಕಾರ ಮಾಡಿದ ಕೆಲಸ ಕಾರ್ಯಗಳ ಚಿತ್ರಗಳನ್ನು ನೀವು ಆರಿಸಿದ್ದಕ್ಕೆ ಸಂತೋಷವಾಗಿದೆ. ನಾವು ಇದನ್ನು ನಮ್ಮ ಕೆಲಸಕ್ಕೆ ಅಭಿನಂದನೆಯಾಗಿ ತೆಗೆದುಕೊಳ್ಳುತ್ತೇವೆ” ಎಂದು ಅವರು ಬರೆದಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ