ಧರ್ಮಸ್ಥಳ | ಬ್ಯಾಂಕ್‌ ಸಭಾಂಗಣದಲ್ಲೇ ನೇಣಿಗೆ ಶರಣಾದ ಸಿಇಒ

Prasthutha|

ಉಜಿರೆ: ಧರ್ಮಸ್ಥಳದ ಸೇವಾ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರನ್, ಬ್ಯಾಂಕಿನ ಸಭಾಂಗಣದಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. 57 ವರ್ಷದ ರವೀಂದ್ರನ್ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

ಬ್ಯಾಂಕಿಗೆ ಬಂದು ಹಾಜರಿ ಪುಸ್ತಕ ದಲ್ಲಿ ಸಹಿ ಮಾಡಿದ್ದ ಅವರು ನಂತರ ಬ್ಯಾಂಕಿನ ಸಭಾಭವನದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.

ನಿವೃತ್ತಿಗೆ ಮೊದಲೇ ಕೆಲಸಕ್ಕೆ ರಾಜೀನಾಮೆ ನೀಡಬೇಕೆಂದು ಬ್ಯಾಂಕಿನ ನಿರ್ದೇಶಕರಿಂದ ಒತ್ತಡ ಹಾಕುತ್ತಿದ್ದರು ಎಂಬ ಆರೋಪ ಕೇಳಿಬರುತ್ತಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ, ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.

Join Whatsapp