ದ್ವೇಷದ ಪೋಸ್ಟ್ ಗಳನ್ನು ತೆಗೆದು ಹಾಕದೆ ಬಿಜೆಪಿಗೆ ಫೇಸ್ಬುಕ್ ಸಹಾಯ : FB ಮಾಜಿ ಅಧಿಕಾರಿಯಿಂದ ಬಹಿರಂಗ

Prasthutha|

ಫೇಸ್ಬುಕ್ ದ್ವೇಷಪೂರಿತ ಪೋಸ್ಟ್ ಗಳನ್ನು ತೆಗೆದು ಹಾಕದೆ ಬಿಜೆಪಿಗೆ ಸಹಾಯ ಮಾಡಿದೆ ಎಂದು ಫೇಸ್ಬುಕ್ ನ ಉನ್ನತ ಅಧಿಕಾರಿಯಾಗಿದ್ದ ಮಾರ್ಕ್ ಎಸ್. ಲೂಕಿ ದೆಹಲಿ ವಿಧಾನಸಭಾ ಸಮಿತಿ ಎದುರು ಬಹಿರಂಗಪಡಿಸಿದ್ದಾರೆ. ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಜುಗರ್ಬರ್ಕ್ ಸೇರಿದಂತೆ ಉನ್ನತ ಅಧಿಕಾರಿಗಳ ಗಮನದಲ್ಲಿದ್ದರೂ ದ್ವೇಷದ ಪೋಸ್ಟ್ ಗಳನ್ನು ಉಳಿಸಲಾಗಿತ್ತು. ದೆಹಲಿ ಗಲಬೆಯ ಸಂದರ್ಭದಲ್ಲಿ ದ್ವೇಷದ ಪೋಸ್ಟ್ ಗಳ ಬಗ್ಗೆ ಫೇಸ್ಬುಕ್ ಕ್ರಮ ಕೈಗೊಳ್ಳಲು ವಿಫಲವಾದ ಬಗ್ಗೆ ವಿಧಾನಸಭಾ ಸಮಿತಿ ವಿವರಣೆ ಕೋರಿತ್ತು.

- Advertisement -

ದೆಹಲಿ ವಿಧಾನಸಭಾ ಉಪಸಮಿತಿಗೆ ನೀಡಿದ ಹೇಳಿಕೆಯಲ್ಲಿ, ಫೇಸ್‌ಬುಕ್‌ನ ಅನೇಕ ಉನ್ನತ ಅಧಿಕಾರಿಗಳು ಆಡಳಿತದಲ್ಲಿರುವ ಬಿಜೆಪಿ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮಾರ್ಕ್ ಎಸ್. ಲೂಕಿ ಹೇಳುತ್ತಾರೆ. ಮಾರ್ಕ್ ಎಸ್. ಲೂಕಿ  2018 ರವರೆಗೆ ಫೇಸ್‌ಬುಕ್‌ನಲ್ಲಿ ಗ್ಲೋಬಲ್ ಇನ್‌ಫ್ಲುಯೆನ್ಸ್ ನ ಸ್ಟ್ರಾಟಜೀಸ್ ಮ್ಯಾನೇಜರ್ ಆಗಿದ್ದರು. ಬಿಜೆಪಿಗಾಗಿ ದ್ವೇಷದ ಪೋಸ್ಟ್ ಗಳನ್ನು ತೆಗೆದುಹಾಕದೆ ಅವರು ಸಂಚು ಹೂಡುತ್ತಿದ್ದಾರೆ. ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಜುಗರ್ಬರ್ಕ್ ಅವರಿಗೆ ತಿಳಿದೇ ಇಂತಹಾ ಸಂಗತಿಗಳು ನಡೆಯುತ್ತವೆ. ದೆಹಲಿ ಗಲಭೆಯ ಸಮಯದಲ್ಲಿ ಫೇಸ್ಬುಕ್ ದ್ವೇಷದ ಪೋಸ್ಟ್ ಗಳನ್ನು ತೆಗೆದು ಹಾಕಿದ್ದರೆ ಗಲಭೆಗಳನ್ನು ನಿಯಂತ್ರಿಸಬಹುದಿತ್ತು ಎಂದು ಲೂಕಿ ಹೇಳಿದ್ದಾರೆ. ಸಮುದಾಯದ ಮಾನದಂಡಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲು ಫೇಸ್ಬುಕ್ ಸಹಕರಿಸುತ್ತಿದೆ ಎಂದು ಲ್ಯೂಕ್ ಬಹಿರಂಗಪಡಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚದ್ದ ಅವರ ಅಧ್ಯಕ್ಷತೆಯಲ್ಲಿರುವ ಸಮಿತಿಯು ತಿಳಿಸಿದೆ.

- Advertisement -