ದೇಶಪ್ರೇಮ ಬೋಧಿಸಲು ಆರೆಸ್ಸೆಸ್ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಿದೆ : ಎಸ್.ಎಂ. ಕೃಷ್ಣ

Prasthutha|

ಬೆಂಗಳೂರು : ದೇಶಪ್ರೇಮವನ್ನು ಬೋಧಿಸುವುದು ಮಾತ್ರವಲ್ಲ, ಅದನ್ನು ಪ್ರಕಟಿಸುವುದಕ್ಕೆ ಆರೆಸ್ಸೆಸ್ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಿದೆ ಎಂದು ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಹೇಳಿದ್ದಾರೆ. ಶೇಷಾದ್ರಿಪುರ ನಗರದ ಆರೆಸ್ಸೆಸ್ ಶಾಖೆಯಲ್ಲಿ ನಡೆದ ವಿಜಯ ದಶಮಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಈ ಮಾತುಗಳನ್ನಾಡಿದ್ದಾರೆ.

“ಸ್ವಾತಂತ್ರ್ಯ ನಂತರದಲ್ಲಿ ದೇಶದ ಸವಾಲುಗಳನ್ನು ಮೆಟ್ಟಿ ನಿಲ್ಲಲು ದೇಶವನ್ನು ಸಿದ್ಧಗೊಳಿಸಲು ಪ್ರಬಲ ಸಂಘಟನೆ ಕಟ್ಟುವುದು ಡಾ. ಹೆಡ್ಗೆವಾರ್ ಅವರ ನಿಲುವಾಗಿತ್ತು’’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -

“ರಾಜಕೀಯ ಕ್ಷೇತ್ರದಲ್ಲಿ ನಾನು ತುಂಬಾ ದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿದ್ದೇನೆ. ನಾನು ರಾಮಕೃಷ್ಣ ಆಶ್ರಮದಲ್ಲಿ ಪರಮಹಂಸ ಮತ್ತು ವಿವೇಕಾನಂದರ ಸ್ಪೂರ್ತಿಯೊಂದಿಗೆ ಬೆಳೆದವನು. ಆರೆಸ್ಸೆಸ್ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಿದೆ’’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ ಉನ್ನತ ಸ್ಥಾನ, ಗೌರವಗಳನ್ನು ಪಡೆದಿದ್ದ ಕೃಷ್ಣ ಅವರು ಕೆಲವು ವರ್ಷಗಳ ಹಿಂದೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯಪಾಲರಂತಹ ಗೌರವಯುತ ಸ್ಥಾನಗಳನ್ನು ಅವರು ಪಡೆದಿದ್ದರು.

- Advertisement -