January 14, 2021

ದೆಹಲಿ ಗಲಭೆ; ಪೊಲೀಸ್ ಸಾಕ್ಷಿಗಳು ಅನುಮಾನಾಸ್ಪದ: ನ್ಯಾಯಾಲಯ

ಹೊಸದಿಲ್ಲಿ: ಕಳೆದ ವರ್ಷ ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮುಸ್ಲಿಮರ ವಿರುದ್ಧ ನಡೆದ ನರಮೇಧಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಏಳು ಮಂದಿಗೆ ನ್ಯಾಯಾಲಯ ಜಾಮೀನು ನೀಡಿದೆ. ಇಬ್ಬರು ಪೊಲೀಸ್ ಸಾಕ್ಷಿಗಳ ಬಗ್ಗೆ ಗಂಭೀರ ಅನುಮಾನಗಳನ್ನು ಮುಂದಿಟ್ಟು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಜಾಮೀನು ನೀಡಿದ್ದಾರೆ. ಪೂರ್ವ ಯೋಜಿತ ಗಲಭೆಯಲ್ಲಿ ಕೊಲ್ಲಲ್ಪಟ್ಟ 54 ಜನರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು. ಇದಲ್ಲದೆ, ಸುಮಾರು 400 ಜನರು ಗಾಯಗೊಂಡಿದ್ದರು. ಕೋಟಿಗಟ್ಟಲೆ ಆಸ್ತಿಗಳನ್ನು ಲೂಟಿ ಮಾಡಿ ನಾಶಪಡಿಸಲಾಗಿತ್ತು.

ಗೋಕಲ್ಪುರಿ ಪ್ರದೇಶದಲ್ಲಿ ಗಲಭೆಕೋರರು ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಆರೋಪದಲ್ಲಿ ದಾಖಲಿಸಿದ್ದ ಪ್ರಕರಣದಲ್ಲಿ ಮೊಹಮ್ಮದ್ ತಾಹಿರ್ ಮತ್ತು ಶಾರುಖ್ ಖಾನ್ ಗೆ ಜಾಮೀನು ನೀಡಲಾಗಿದೆ. ಜಾಮೀನು ಅರ್ಜಿಯ ವಿರುದ್ಧ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸ್ ಕಾನ್‌ಸ್ಟೆಬಲ್ ವಿಪಿನ್ ಮತ್ತು ಹೆಡ್ ಕಾನ್‌ಸ್ಟೆಬಲ್ ಹರಿ ಬಾಬು ಅವರ ಸಾಕ್ಷಿ ಹೇಳಿಕೆಗಳು ಅನುಮಾನಾಸ್ಪದವಾಗಿದೆ ಎಂದು ಇಬ್ಬರಿಗೂ ಜಾಮೀನು ನೀಡಲಾಗಿದೆ.

ತಾಹೀರ್ ನ ಹೆಸರು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿಲ್ಲ. ಘಟನೆಯಲ್ಲಿ ಆತನ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ಘಟನೆಯ ಸಮಯದಲ್ಲಿ ಸಾಕ್ಷಿಗಳಾದ ಪೊಲೀಸರು ಈ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದರೂ ಅವರ ಸಾಕ್ಷ್ಯ ಹೇಳಿಕೆಗಳು ಅನುಮಾನಾಸ್ಪದವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪೊಲೀಸರಾಗಿದ್ದರೂ ಘಟನೆಯನ್ನು ಠಾಣೆಯಲ್ಲಿ ವರದಿ ಮಾಡಲು ಅಥವಾ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವುದನ್ನು ವಿಳಂಬ ಮಾಡಿರುವುದೇಕೆ? ಇಬ್ಬರು ಪೊಲೀಸ್ ಸಾಕ್ಷಿಗಳ ಹೇಳಿಕೆಯಲ್ಲಿ ಗಂಭೀರ ಅನುಮಾನವನ್ನು ಉಂಟುಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಟಾಪ್ ಸುದ್ದಿಗಳು

ವಿಶೇಷ ವರದಿ