ದಮ್ಮಾಮ್: ಐ.ಎಸ್.ಎಫ್ ವತಿಯಿಂದ ಸರಕಾರಿ ಯೋಜನೆಗಳ ಕುರಿತು ವೆಬಿನಾರ್

Prasthutha|

ದಮ್ಮಾಮ್: ತನ್ನ ಸದಸ್ಯರಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಅರಿವುಂಟುಮಾಡುವ ಉದ್ದೇಶದಿಂದ  ಇಂಡಿಯನ್ ಸೊಶಿಯಲ್ ಫೋರಂ, ದಮ್ಮಾಮ್, ಕರ್ನಾಟಕ ರಾಜ್ಯದ ವತಿಯಿಂದ ತರಬೇತಿ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಆಯೋಜಿಸಲಾಗಿತ್ತು.

ಇನ್ಫಾರ್ಮೇಶನ್ ಫೌಂಡೇಶನ್ ನ ನಿರ್ದೇಶಕ ಅಬ್ದುಲ್ ಖಾದರ್ ನಾವೂರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದು, ಸರಕಾರದ ವಿವಿಧ ಯೋಜನೆಗಳು ಮತ್ತು ಅವುಗಳನ್ನು ಸದುಪಯೋಗಪಡಿಸುವ ಕುರಿತು ಮಾಹಿತಿ ನೀಡಿದರು.

- Advertisement -

ಸುಮಾರು 40 ಮಂದಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನೌಶಾದ್ ಬೋಳಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇಂಡಿಯನ್ ಸೋಶಿಯಲ್ ಫೋರಂ ದಮ್ಮಾಮ್ ಕರ್ನಾಟಕ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಕಾಟಿಪಳ್ಳ ವಂದಿಸಿದರು.

- Advertisement -