ತ್ರಿಪುರ: ಬಿಜೆಪಿ ಸರಕಾರದ ವಿರುದ್ಧ ಶಿಕ್ಷಕರ ಅನಿರ್ದಿಷ್ಠಾವಧಿ ಧರಣಿ

Prasthutha|

ಅಗರ್ತಲ: 2014ರಲ್ಲಿ ಉಚ್ಛಾಟಿಸಲಾದ 10323 ಶಾಲಾ ಶಿಕ್ಷಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದಾಗಿ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಎರಡು ತಿಂಗಳ ಹಿಂದೆ ಭರವಸೆ ನೀಡಿದ ಬಳಿಕ ಇದೀಗ ಸಂಬಂಧಿಸಿದ ಶಿಕ್ಷಕರು ಸರಕಾರದ ಗಮನ ಸೆಳೆಯುವುದಕ್ಕಾಗಿ ಅನಿರ್ದಿಷ್ಟಾವಧಿ ಧರಣಿ ಕುಳಿತಿದ್ದಾರೆ. ಡಿಸೆಂಬರ್ 7ರಂದು ಈ ಪ್ರದರ್ಶನ ಆರಂಭಗೊಂಡಿದೆ.

ಆಡಳಿತರೂಢ ಬಿಜೆಪಿ ಸರಕಾರ ಚುನಾವಣೆಗೆ ಮುಂಚೆ ನೀಡಿದ ವಾಗ್ದಾನದಂತೆ ತಮಗೆ ಖಾಯಂ ಪರಿಹಾರ ಒದಗಿಸಬೇಕೆಂದು ಶಿಕ್ಷಕರು ಬೇಡಿಕೆಯನ್ನಿತ್ತಿದ್ದಾರೆ. ಈವರೆಗೆ ಸರಕಾರ ಶಿಕ್ಷಕರ ಬೇಡಿಕೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅನಾಸಕ್ತಿ ವಹಿಸಿದೆ.

- Advertisement -

2014ರಿಂದ ಈ 10,323 ಶಿಕ್ಷಕರಲ್ಲಿ 76 ಮಂದಿ ಸಾವನ್ನಪ್ಪಿದ್ದು, ಅವರು ಸರಕಾರಿ ಉದ್ಯೋಗದ ಸಂಕೀರ್ಣ ಇತಿಹಾಸವನ್ನು ಹೊಂದಿದ್ದಾರೆ.

2010 ಮತ್ತು 2014ರ ಮಧ್ಯೆ ಈ ಹಿಂದಿನ ಎಡರಂಗ ಸರಕಾರದಿಂದ ಹುದ್ದೆಗೆ ನೇಮಕಾತಿಗೊಂಡಿದ್ದರು. ಆದರೆ 2014ರಲ್ಲಿ ಶಿಕ್ಷಕರ ಹುದ್ದೆಗಳಿಗೆ ಸ್ಪರ್ಧಿಸಿದ್ದ ಇತರ ಅಭ್ಯರ್ಥಿಗಳ ದೂರಿನ ಆದಾರದಲ್ಲಿ ನಡೆದ ವಿಚಾರಣೆಯ ತ್ರಿಪುರ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ನೇಮಕಾತಿಯಲ್ಲಿ ಅವ್ಯವಹಾರವಾಗಿರುವುದನ್ನು ತ್ರಿಪುರ ಹೈಕೋರ್ಟ್ ಶೋಧಿಸಿತ್ತು ಮತ್ತು ಅಸಾಂವಿಧಾನಿಕ ಎಂದು ಘೋಷಿಸಿತ್ತು. ಆದರೆ ತ್ರಿಪುರಾ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದರೂ ತಾತ್ಕಾಲಿಕವಾಗಿ ಹುದ್ದೆಯನ್ನು ಮುಂದುವರಿಸಬಹುದೆಂದು ಹೇಳಿತ್ತು.

- Advertisement -