ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ‘ಕಿರಿಯ ಹಿಟ್ಲರ್’ : ಸಿಪಿಎಂ

Prasthutha|

ಕೊಲ್ಕತಾ : ‘ಕಮ್ಯುನಿಸ್ಟ್ ಬೀಜ’ಗಳನ್ನು ಬುಡಮೇಲು ಮಾಡಬೇಕು ಎಂದಿರುವ ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ಅವರನ್ನು ಸಿಪಿಎಂ ‘ಕಿರಿಯ ಹಿಟ್ಲರ್’ ಎಂದು ಕರೆದಿದೆ.
“ನಾವು ಫ್ಯಾಶಿಸ್ಟ್ ಒಬ್ಬರ ಧ್ವನಿ ಕೇಳುತ್ತಿದ್ದೇವೆ. ಸಾಂವಿಧಾನಿಕ ಸ್ಥಾನವನ್ನು ಹೊಂದಿರುವಾಗ ಅವರು ಅಂತಹ ಹೇಳಿಕೆ ನೀಡುವಂತಿಲ್ಲ. ಈ ಕಿರಿಯ ಹಿಟ್ಲರ್ ಅನ್ನು ಇತಿಹಾಸ ಯಾವತ್ತೂ ಕ್ಷಮಿಸುವುದಿಲ್ಲ’’ ಎಂದು ಸಿಪಿಎಂ ಹೇಳಿಕೆಯೊಂದರಲ್ಲಿ ತಿಳಿಸಿದೆ.
ತಮ್ಮ ಕಾರ್ಯಕರ್ತರು ಮತ್ತು ನಾಯಕರ ಧ್ವನಿ ಅಡಗಿಸಲು ಬಿಜೆಪಿ-ಐಪಿಎಫ್ ಟಿ ನೇತೃತ್ವದ ಸರಕಾರ ಬಲವನ್ನು ಪ್ರಯೋಗಿಸುತ್ತಿದೆ. ತಮ್ಮ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಗಿದೆ ಎಂದೂ ಸಿಪಿಎಂ ಆಪಾದಿಸಿದೆ.

- Advertisement -