ಸೌದಿಯಲ್ಲಿ ಸಂಕಷ್ಟದಲ್ಲಿದ್ದ ಗುಲ್ಬರ್ಗ ನಿವಾಸಿಯನ್ನು ಸ್ವದೇಶಕ್ಕೆ ಕಳುಹಿಸಲು ನೆರವಾದ ಐ.ಎಸ್.ಎಫ್

Prasthutha: June 15, 2021

ಸೌದಿ ಅರೇಬಿಯಾ: ಇಲ್ಲಿಗೆ ಸಮೀಪದ ರಾನಿಯಾ ಎಂಬಲ್ಲಿ ಪ್ರಾಯೋಜಕನಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ವ್ಯಕ್ತಿಯೋರ್ವರನ್ನು ತವರಿಗೆ ಮರಳಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ -ಐ.ಎಸ್.ಎಫ್ ಜಿದ್ದಾ ಘಟಕ ಯಶಸ್ವಿಯಾಗಿದೆ.


25ರ ಹರೆಯದ ಗುಲ್ಬರ್ಗಾದ ಅಮೀನ್ ಸಾಬ್ ಎಂಬವರು ಕಳೆದ ಒಂದೂವರೆ ವರ್ಷಗಳಿಂದ ಇಲ್ಲಿ ಹೌಸ್ ಡ್ರೈವರ್ ವೃತ್ತಿ ಮಾಡುತ್ತಿದ್ದರು. ನಿರಂತರ ಕಿರುಕುಳ ನೀಡುತ್ತಿದ್ದ ಅವರ ಪ್ರಾಯೋಜಕನು, ಅಮೀನ್ ಅವರಿಗೆ ಕಳೆದೆರಡು ತಿಂಗಳಿಂದ ವೇತನ ನೀಡದೆ ಮನೆಯೊಂದರಲ್ಲಿ ಕೂಡಿ ಹಾಕಿದ್ದ. ನಂತರ ಎಕ್ಸಿಟ್ ನೀಡದೆ ತಾಯಿಫ್ ನಗರಕ್ಕೆ ತಂದು ಬಿಟ್ಟು ಹೋಗಿದ್ದ. ತವರಿಗೆ ಮರಳಲು ಟಿಕೆಟ್ ಗೆ ಹಣವಿಲ್ಲದೆ ಅಮೀನ್ ಸಾಬ್ ಕಂಗಾಲಾಗಿದ್ದರು.


ಮಾಹಿತಿ ತಿಳಿದ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರು, ಅಮೀನ್ ಅವರನ್ನು ತವರಿಗೆ ಮರಳಿಸಲು ಬೇಕಾದ ಏರ್ಪಾಡುಗಳನ್ನು ಮಾಡಿದರು. ಪ್ರಾಯೋಜಕನಿಗೆ ಕರೆ ಮಾಡಿ ಎಕ್ಸಿಟ್ ಕೊಡುವಂತೆ ಮನವೊಲಿಸಿ, ಎಕ್ಸಿಟ್ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸಂತ್ರಸ್ತನನ್ನು ಜಿದ್ದಾಗೆ ಕಳುಹಿಸಿ ಪಿಸಿಆರ್ ಟೆಸ್ಟ್ ಮಾಡಿಸಿ ದಾನಿಗಳ ನೆರವಿನೊಂದಿಗೆ ವಿಮಾನ ಟಿಕೆಟ್ ವ್ಯವಸ್ಥೆಯನ್ನು ಏರ್ಪಾಟು ಮಾಡಿದ್ದಾರೆ.
ವಿಮಾನ್ ಟಿಕೆಟ್ ಖರೀದಿಗೆ ನೆರವಾದ ಗುಲ್ಬರ್ಗಾದ ಅನಿವಾಸಿ ಸದಸ್ಯರು ಮತ್ತು ತಾಯಿಫ್ ನಲ್ಲಿ ನೆರವಾದ ಇತರ ಯುವಕರಿಗೆ ಐ.ಎಸ್.ಎಫ್ ಕೃತಜ್ಞತೆ ಸಲ್ಲಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ