April 3, 2021

ತಾಜುಶ್ಶರೀಅಃ ಆಲಿ ಕುಂಞಿ ಉಸ್ತಾದ್ ನಿಧನ : ಗಣ್ಯರ ಸಂತಾಪ

ಧಾರ್ಮಿಕ ವಿಧ್ವಾಂಸರೂ , ಸಮಸ್ತ ಉಪಾದ್ಯಕ್ಷರಾಗಿದ್ದ ಶೈಖುನಾ ಆಲಿ ಕುಂಞಿ ಉಸ್ತಾದರ ನಿಧನಕ್ಕೆ ಸಮಾಜದ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಹಿರಿಯ ವಿದ್ವಾಂಸ ಅಲಿಕುಂಞಿ ಉಸ್ತಾದರ ನಿಧನವು ಅತೀವ ದುಖವನ್ನುಂಟು ಮಾಡಿದೆ, ಭಾಷಣಕಾರ, ಗ್ರಂಥಕರ್ತರಾಗಿ ಅವರು ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಎಂದೂ ಸ್ಮರಣೀಯ. ಅವರ ಅದರ್ಶ ಜೀವನವು ಯುವ ತಲೆಮಾರಿಗೆ ಪ್ರೇರಣೆಯಾಗಲಿ. ಕುಟುಂಬ ವರ್ಗಕ್ಕೆ, ಹಿತೈಷಿಗಳಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ಅಲ್ಲಾಹನು ನೀಡಲಿ ಎಂದು ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷರಾಗಿರುವ ಯಾಸಿರ್ ಹಸನ್ ಅವರು ತಮ್ಮ ಸಂತಾಪ ಸೂಚನಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.


ಕರ್ನಾಟಕ ಸಂಯುಕ್ತ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಫಿ ಸಅದಿ , ಎಸ್ಕೆ ಎಸ್ಸೆಸೆಫ್ ರಾಜ್ಯಾಧ್ಯಕ್ಷರಾದ ಅನೀಸ್ ಕೌಸರಿ , ದಾರಿಮೀಸ್ ಒಕ್ಕೂಟ ಅದ್ಯಕ್ಷರಾದ ಎಸ್ ಬಿ ದಾರಿಮಿ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಫ್ರಧಾನ ಕಾರ್ಯದರ್ಶಿಗಳಾದ ಜಾಫರ್ ಸ್ವಾದಿಕ್ ಫೈಝಿ ಅವರೂ ಕೂಡಾ ತಮ್ಮ ಸಂತಾಪವನ್ನು ಪ್ರಕಟಿಸಿದ್ದಾರೆ.
ಅದೇ ರೀತಿ ಸೈಯದ್ ಅಲ್ ಹಾದಿ ಇಬ್ರಾಹೀಂ ತಂಙಳ್ ಅಲ್ ಖಾಸಿಮಿ ಆತೂರು, ಸಮಸ್ತ ಕೇರಳ ಜಂಇಯತ್ತುಲ್ ಮುಅಲ್ಲಿಮೀನ್ ಉಪ್ಪಿನಂಗಡಿ ರೇಂಜ್ ಅದ್ಯಕ್ಷರಾದ ಸೈಯದ್ ಅನಸ್ ತಂಙಳ್ ಅಲ್ ಅಝ್ಹರಿ , ಯೂತ್ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ ಸೇರಿದಂತೆ ಇನ್ನಿತರರು ಶೈಖುನಾರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!