ಡಿ.10ಕ್ಕೆ ಹೊಸ ಸಂಸತ್ತಿನ ಕಟ್ಟಡಕ್ಕೆ ಪ್ರಧಾನಿ ಮೋದಿ ಅವರಿಂದ ಶಿಲಾನ್ಯಾಸ

Prasthutha|

ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 10ರಂದು ಹೊಸ ಸಂಸತ್ತಿನ ಕಟ್ಟಡಕ್ಕೆ ಅಡಿಪಾಯ ಹಾಕಿ ಭೂಮಿ ಪೂಜೆ ನಡೆಸಿಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿಮಾಡಿದೆ.

ಸಂಸತ್ತಿನ ಕಟ್ಟಡದ ಉಸ್ತುವಾರಿ ವಹಿಸಿರುವ ಬಿರ್ಲಾ ಅವರು, ಪ್ರಧಾನಿ ಅವರಿಗೆ ಔಪಚಾರಿಕ ಆಹ್ವಾನ ನೀಡಿದರು.

- Advertisement -


“ನಾವು ಹಳೆಯ ಕಟ್ಟಡದಲ್ಲಿ ಸ್ವತಂತ್ರ ಭಾರತದ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ನಾವು 75 ವರ್ಷಗಳನ್ನು ಪೂರ್ಣಗೊಳಿಸುವಾಗ, ಹೊಸ ಸಂಸತ್ತಿನ ಕಟ್ಟಡದಲ್ಲಿ ಉಭಯ ಸದನಗಳ ಅಧಿವೇಶನವನ್ನು ನಡೆಸಲಿದ್ದೇವೆ. ಇದು ಬರೀ ಕಟ್ಟಡ ಅಲ್ಲ, 130 ಕೋಟಿ ಜನರ ಕನಸುಗಳ ಈಡೇರಿಕೆಯಾಗಿದೆ” ಎಂದು ಬಿರ್ಲಾ ಮಾಧ್ಯಮಕ್ಕೆ ತಿಳಿಸಿದರು.

ಈಗಿರುವ ಸಂಸತ್ತಿನ ಕಟ್ಟಡವನ್ನು ದೇಶದ ಪುರಾತತ್ವ ಆಸ್ತಿಯಾಗಿ ಸಂರಕ್ಷಿಸಲಾಗುವುದು ಎಂದು ಅವರು ಹೇಳಿದರು.


ಸೆಪ್ಟೆಂಬರ್ ನಲ್ಲಿ, ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸುವ ಪ್ರಯತ್ನವನ್ನು ಪಡೆದುಕೊಂಡಿತ್ತು. ಇದು ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿದೆ. ಈ ಯೋಜನೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದ್ದು, ಪ್ರತಿಪಕ್ಷಗಳು ಕೂಡ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ. ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸುವ ನಿರ್ಧಾರವನ್ನು ಸರ್ಕಾರ ಸಮರ್ಥಿಸಿದೆ.

- Advertisement -