ಡಿಸೆಂಬರ್ | ಎರಡನೇ ಬಾರಿ ಎಲ್ ಪಿ ಜಿ ದರ ಏರಿಕೆ

Prasthutha|

ನವದೆಹಲಿ: ಎಲ್ ಪಿ ಜಿ ದರವನ್ನು ಪ್ರತಿ ಸಿಲಿಂಡರ್ ಗೆ ರೂ.50 ರಷ್ಟು ಏರಿಸಲಾಗಿದೆ. ಈ ತಿಂಗಳಲ್ಲಿ ಇದು ಎರಡನೇ ಬಾರಿಯ ಏರಿಕೆಯಾಗಿದೆ.

ಡಿಸೆಂಬರ್ 1ರಂದು ಪ್ರತಿ ಸಿಲಿಂಡರ್ ಗೆ ರೂ.50 ರಷ್ಟು ಹೆಚ್ಚಿಸಲಾಗಿತ್ತು. 14.2 ಕೆ.ಜಿ ಸಿಲಿಂಡರ್ ನ ದರ ರೂ.644 ಇದ್ದದ್ದು ಇದೀಗ ರೂ.694ಕ್ಕೆ ಏರಿಕೆಯಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರಕಟನೆಯಲ್ಲಿ ತಿಳಿಸಿವೆ.

- Advertisement -

5 ಕೆ.ಜಿ ಸಿಲಿಂಡರ್ ಗೆ ರೂ.18 ರಷ್ಟು ಹೆಚ್ಚಳವಾಗಿದ್ದು, 19 ಕೆ.ಜಿ ಸಿಲಿಂಡರ್ ಗೆ ರೂ.36.50 ರಷ್ಟು ಹೆಚ್ಚಳವಾಗಿದೆ.

ಈ ತಿಂಗಳು ಎಲ್ ಪಿ ಜಿ ಬೆಲೆ ಹೆಚ್ಚಳವಾಗಿರುವ ಕಾರಣ ಗ್ರಾಹಕರಿಗೆ ಸಬ್ಸಿಡಿ ಪಾವತಿ ಮತ್ತೆ ಆರಂಭವಾಗುವ ಸಾಧ್ಯತೆಯಿದೆ.

- Advertisement -