ಡಬ್ಲೂಆರ್‌ಡಿಸಿ ಕೋರ್ಸ್: ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಣೆ

0
23

ಎನ್‌ಡಬ್ಲೂಎಫ್ ಕರ್ನಾಟಕ ಇದರ ವತಿಯಿಂದ ನಡೆಸಲಾದ 16 ದಿನಗಳ ಡಬ್ಲೂಆರ್‌ಡಿಸಿ ಕೋರ್ಸ್‌ನ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭವು ಜುಲೈ 31ರಂದು ಮಂಗಳೂರಿನ ಕೋಸ್ಟಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ಜರುಗಿತು.

ಕೋರ್ಸಿನ ನಿರ್ದೇಶಕಿ ಫಾತಿಮಾ ನಸೀಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಯಾಗಿ                ಭಾಗವಹಿಸಿದ್ದ ಎನ್‌ಡಬ್ಲೂಎಫ್ ರಾಜ್ಯ ಕಾರ್ಯದರ್ಶಿ ನಸೀಮಾ ಬೆಂಗಳೂರು, ಮಹಿಳೆಯರು 4 ಗೋಡೆಗಳ ಮಧ್ಯೆ ತಮ್ಮ ಭವಿಷ್ಯವನ್ನು ಕಳೆಯದೇ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಈ ಕೋರ್ಸಿನ ಮಹತ್ವವನ್ನು ಅರಿತು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆಯನ್ನು ನೀಡಿದರು.

ಎನ್‌ಡಬ್ಲೂಎಫ್ ರಾಜ್ಯಾಧ್ಯಕ್ಷೆ ಝೀನತ್ ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಬ್ಲೂಆರ್‌ಡಿಸಿ ಸಲಹಾ ಸಮಿತಿ ಸದಸ್ಯರಾದ ನೌಶೀರ ಹಾಗೂ ಸೈದ ಯೂಸುಫ್ ಉಪಸ್ಥಿತರಿದ್ದರು. ತರಬೇತಿಯನ್ನು ಪೂರ್ಣಗೊಳಿಸಿದ 15 ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಮುಫೀದಾ ಸ್ವಾಗತಿಸಿ, ಶಹನಾಜ್ ವಂದಿಸಿದರು. ಹಲೀಮಾ ಸಹ್ಲಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here