January 11, 2021

ಟ್ರಂಪ್ ರನ್ನು ಸಾರ್ವಕಾಲಿಕ ಕೆಟ್ಟ ಅಧ್ಯಕ್ಷನೆಂದು ಬಣ್ಣಿಸಿದ ಅರ್ನಾಲ್ಡ್

ಯುಎಸ್ ಕ್ಯಾಪಿಟೊಲ್ ಗೆ ನುಗ್ಗಿದ ಗುಂಪನ್ನು ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್ ಅರ್ನಾಲ್ಡ್ ಶ್ವಾಝ್ನಿಗರ್ ನಾಝಿಗಳಿಗೆ ಹೋಲಿಸಿದ್ದಾರೆ. ಸಾರ್ವಕಾಲಿಕ ಕೆಟ್ಟ ಅಧ್ಯಕ್ಷ ಎಂಬುದಾಗಿ ಇತಿಹಾಸದಲ್ಲಿ ಗುರುತಿಸಲ್ಪಡಲಿರುವ ವಿಫಲ ನಾಯಕ ನೆಂದು ಅವರು ಡೊನಾಲ್ಡ್ ಟ್ರಂಪ್ ರನ್ನು ಬಣ್ಣಿಸಿದ್ದಾರೆ.

“ಬುಧವಾರವು ಅಮೆರಿಕಾದಲ್ಲಿ ಒಡೆದ ಗಾಜಿನ ರಾತ್ರಿಯಾಗಿತ್ತು” ಎಂದು ರಿಪಬ್ಲಿಕನ್ ರವಿವಾರದಂದು ಸಾಮಾಜಿಕ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ವೀಡಿಯೊದಲ್ಲಿ ಹೇಳಿದ್ದಾರೆ.

“1938ರಲ್ಲಿ ಜರ್ಮನಿ ಮತ್ತು ಆಸ್ಟ್ರಿಯಾಗಳಲ್ಲಿ ನಾಝಿಗಳು ಯಹೂದಿಗಳ ಮನೆ, ಶಾಲೆ ಮತ್ತು ವಾಣಿಜ್ಯಗಳನ್ನು ಧ್ವಂಸಗೊಳಿಸಿದ್ದರು. ಈ ದಾಳಿಯು ‘ಒಡೆದ ಗಾಜಿನ ರಾತ್ರಿ’ ಎಂಬುದಾಗಿ ಜನಪ್ರಿಯಗೊಂಡಿತ್ತು” ಎಂದು ಅವರು ಹೇಳಿದರು.

“ಒಡೆದ ಗಾಜು ಯುಎಸ್ ಕ್ಯಾಪಿಟೊಲ್ ನ ಕಿಟಕಿಗಳಲ್ಲಿದ್ದವು. ಆದರೆ ಗುಂಪು ಕೇವಲ ಕ್ಯಾಪಿಟೊಲ್ ನ ಕಿಟಕಿಗಳನ್ನು ನುಚ್ಚುನೂರು ಮಾಡಿರುವುದಷ್ಟೇ ಅಲ್ಲ. ನಾವು ನಂಬಿದ ಸಿದ್ಧಾಂತವನ್ನೂ ಅವರು ಧ್ವಂಸಗೊಳಿಸಿದರು. ನಮ್ಮ ದೇಶವು ನಿಂತಿರುವ ಆದರ್ಶವನ್ನೇ ಅವರು ಒಡೆದರು” ಎಂದು ಅರ್ನಾಲ್ಡ್ ಹೇಳಿದರು.

ಅವರು ಅಮೆರಿಕಾದ ಬಲಪಂಥೀಯ ತೀವ್ರಗಾಮಿ ಗುಂಪು ಪ್ರೌಡ್ ಬಾಯ್ಸ್ ಅನ್ನು ನಾಝಿಗಳಿಗೆ ಹೋಲಿಸಿದ್ದಾರೆ. ಗಲಭೆಯ ನಂತರ ಈ ಸಂಘಟನೆಯ ಕೆಲವು ನಾಯಕರನ್ನು ರಾಷ್ಟ್ರ ರಾಜಧಾನಿಯಲ್ಲಿ ಬಂಧಿಸಲಾಗಿದೆ.

ಟಾಪ್ ಸುದ್ದಿಗಳು

ವಿಶೇಷ ವರದಿ