ಟಿವಿ ಚರ್ಚೆಯ ನಡುವೆ ದ್ವೇಷದ ಮಾತು : ಅರ್ನಾಬ್ ಗೆ ಮುಂಬೈ ಪೊಲೀಸರಿಂದ ನೋಟೀಸ್

Prasthutha|


ಮುಂಬೈ : ಟಿವಿ ಚರ್ಚೆಯ ವೇಳೆಯಲ್ಲಿ ಸಮುದಾಯ ಧ್ರುವೀಕರಿಸುವ ಹೇಳಿಕೆ ನೀಡಿದ್ದಕ್ಕಾಗಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಮುಂಬೈ ಪೊಲೀಸರು ನೋಟೀಸು ನೀಡಿದ್ದಾರೆ. ಈ ವರ್ಷ ಏಪ್ರಿಲ್ ನಲ್ಲಿ ಪಾಲ್ಘರ್ ಗುಂಪು ದಾಳಿ ಮತ್ತು ಬಾಂದ್ರಾ ವಲಸೆ ಘಟನೆ ಕುರಿತು ಚರ್ಚೆಯ ಸಂದರ್ಭದಲ್ಲಿ ದ್ವೇಷಪೂರಿತ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಸಿಆರ್ಪಿಸಿ ಸೆಕ್ಷನ್ 108 ಅಡಿಯಲ್ಲಿ ನೋಟೀಸು ನೀಡಲಾಗಿದೆ.


ವರ್ಲೀ ಡಿವಿಶನ್ ಸ್ಪೆಷಲ್ ಎಕ್ಸ್ಕ್ಯೂಟಿವ್ ಮ್ಯಾಜಿಸ್ಟ್ರೇಟ್, ಅಸಿಸ್ಟಂಟ್ ಪೊಲೀಸ್ ಕಮೀಷನರ್ ರವರ ಮುಂದೆ ಶುಕ್ರವಾರ ಸಂಜೆ 4 ಗಂಟೆಗೆ ಹಾಜರಾಗಬೇಕೆಂದು ನೋಟೀಸು ನೀಡಲಾಗಿದೆ.
ಅವರ ಅಭಿಪ್ರಾಯಗಳು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಭಿನ್ನಾಭಿಪ್ರಾಯ ಮತ್ತು ದ್ವೇಷವನ್ನು ಉಂಟುಮಾಡುತ್ತವೆ ಮತ್ತು ಟಿವಿ ಕಾರ್ಯಕ್ರಮವು ಯೂಟ್ಯೂಬ್ ನಲ್ಲಿ ಬಲವಾದ ಪ್ರತಿಕ್ರಿಯೆಗಳನ್ನು ಉಂಟುಮಾಡಿದೆ ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.

- Advertisement -