ಜೆರುಸಲೇಂನ ಆಸ್ಪತ್ರೆಯ ತುರ್ತು ಘಟಕದಲ್ಲಿ ಅಶ್ರುವಾಯು ಸಿಡಿಸಿದ ಇಸ್ರೇಲ್ ಪೊಲೀಸರು

Prasthutha|

ಅಮ್ಮಾನ್ : ಪೂರ್ವ ಜೆರುಸಲೇಂನ ಮಖಾಸೀದ್ ಆಸ್ಪತ್ರೆಯ ತುರ್ತು ಘಟಕದಲ್ಲಿ ಎರಡು ಕುಟುಂಬಗಳ ನಡುವಿನ ಜಗಳವನ್ನು ಬಿಡಿಸಲು ಇಸ್ರೇಲಿ ಪೊಲೀಸರು ಅಶ್ರುವಾಯು ಅನಿಲ ಬಳಸಿದ್ದಾರೆ ಎಂದು ಫೆಲೆಸ್ತೀನಿಯನ್ ಮೂಲಗಳು ತಿಳಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ಕುರಿತ ವೀಡಿಯೊ ಫೆಲೆಸ್ತೀನಿಯನ್ ಅಧಿಕಾರಿಗಳ ಹೇಳಿಕೆಯನ್ನು ದೃಢಪಡಿಸಿದೆ.
ಆಸ್ಪತ್ರೆಯ ಕೋಣೆಯಲ್ಲಿ ಸಂಪೂರ್ಣ ಅನಿಲ ತುಂಬಿದ್ದ ವೀಡಿಯೊವೊಂದು ಹರಿದಾಡಿದೆ. ಅಶ್ರುವಾಯುವಿನಿಂದಾಗಿ ಆಸ್ಪತ್ರೆಯಲ್ಲಿ ಗದ್ದಲ ಉಂಟಾಗಿತ್ತು. ಹಲವಾರು ಮಂದಿಗೆ ಉಸಿರಾಟದ ಸಮಸ್ಯೆ ಸೃಷ್ಟಿಯಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆಸ್ಪತ್ರೆಯೊಳಗೆ ಪೊಲೀಸರನ್ನು ಕರೆಸುವುದು ಅನಿವಾರ್ಯವಾಗಿತ್ತು. ಇಲ್ಲವಾದಲ್ಲಿ ಆಸ್ಪತ್ರೆಯೊಳಗೆ ರಕ್ತದ ಕೋಡಿ ಹರಿಯುತಿತ್ತು. ಪರಿಸ್ಥಿತಿ ನಿಯಂತ್ರಿಸಲು ತಮ್ಮಿಂದ ಸಾಧ್ಯವಾಗಿರಲಿಲ್ಲ. ಆರಂಭದಲ್ಲಿ ಇಬ್ಬರು ಪೊಲೀಸರು ಬಂದಿದ್ದು, ಅವರಿಂದಲೂ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹೆಚ್ಚು ಪೊಲೀಸರು ಆಗಮಿಸಿ ತುರ್ತು ಘಟಕದಲ್ಲಿ ಅಶ್ರುವಾಯು ಸಿಡಿಸಿದರು. ಇದು ರೋಗಿಗಳಲ್ಲಿ ಉಸಿರಾಟದ ಸಮಸ್ಯೆಯನ್ನು ಸೃಷ್ಟಿಸಿತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

- Advertisement -