ಜಿದ್ದಾ: ಐ.ಎಸ್.ಎಫ್ ವತಿಯಿಂದ ಆನ್ ಲೈನ್ ಮೂಲಕ ಉಚಿತ ಮೈಕ್ರೊಸಾಫ್ಟ್ ಅಫೀಸ್ ಕೋರ್ಸ್

Prasthutha|

ಜಿದ್ದಾ: ಇಂಡಿಯನ್ ಸೋಶಿಯಲ್ ಫೋರಂ, ಜಿದ್ದಾ, ಕರ್ನಾಟಕ ರಾಜ್ಯ ಘಟಕದ ವತಿಯಿಂದ ನವೆಂಬರ್  ತಿಂಗಳಲ್ಲಿ ಆನ್ ಲೈನ್ ಮೂಲಕ 8 ದಿನಗಳ ಉಚಿತ ಮೈಕ್ರೊಸಾಫ್ಟ್ ಅಫೀಸ್ ತರಬೇತಿ ಕೋರ್ಸ್ ನೀಡಲಾಗುತ್ತದೆ.

ನವೆಂಬರ್ 6 ಮತ್ತು 7ನೆ ತಾರೀಕಿನಂದು ಮೈಕ್ರೊ ಸಾಫ್ಟ್ ಅಫೀಸ್, 13 ಮತ್ತು 14 ರಂದು ಎಕ್ಸೆಲ್ ಕುರಿತು ಪ್ರಾಥಮಿಕ ತರಬೇತಿಯನ್ನು ಆನ್ ಲೈನ್ ಮೂಲಕ ನೀಡಲಾಗುವುದು. ನ.20 ಮತ್ತು 21 ರಂದು ಮೈಕ್ರೊ ಸಾಫ್ಟ್ ವರ್ಡ್ ಹಾಗೂ 27 ಮತ್ತು 28ರಂದು ಪವರ್ ಪಾಯಿಂಟ್ ತರಬೇತಿಗಳನ್ನು ನೀಡಲಾಗುವುದು. ಈ ಎಲ್ಲಾ ದಿನ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯ ತನಕ ತರಬೇತಿ ನೀಡಲಾಗುವುದು ಎಂದು ಸಂಘಟನೆ ಪ್ರಕಟನೆಯಲ್ಲಿ ತಿಳಿಸಿದೆ.

- Advertisement -

ಆಸಕ್ತರು ಮೊಬೈಲ್ ಸಂಖ್ಯೆ 0509623070 ಅಥವಾ ಇಮೈಲ್ [email protected] ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.

- Advertisement -