ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ!

0
45

ರಾಂಚಿ: ಜಾರ್ಖಂಡ್‌ನಲ್ಲಿ ಇತ್ತೀಚೆಗೆ ಮತ್ತೊಂದು ಗುಂಪುದಾಳಿ ನಡೆದಿದ್ದು, ಓರ್ವ ವ್ಯಕ್ತಿಯನ್ನು ಹತ್ಯೆಗೈಯ್ಯಲಾಗಿದೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.

ಖುಂಟಿಯ ಜಲ್ತಾಂಡ್ ಸುವಾರಿ ಗ್ರಾಮದಲ್ಲಿ ಗೋಹತ್ಯೆ ನಡೆಸಿದ್ದಾರೆ ಎಂದು ಆರೋಪಿಸಿ ಕಲಾಂಟಸ್ ಬಾರ್ಲಾ, ಫಿಲಪ್ ಹೋರೊ ಮತ್ತು ಫಾಗು ಕಚ್ಚಾಪ್ ಎಂಬುವವರ ಮೇಲೆ ಉದ್ರಿಕ್ತ ಜನರ ಗುಂಪೊಂದು ಥಳಿಸಿದೆ. ದಾಳಿಯಿಂದ ತೀವ್ರ ಗಾಯಗೊಂಡಿದ್ದ ಬಾರ್ಲಾರವರು ಆಸ್ಪತ್ರೆಗೆ ಸಾಗಿಸುವ ಮುನ್ನ ಮೃತಪಟ್ಟಿದ್ದಾರೆ.

‘‘ಏಳು ಜನರನ್ನು ವಿಚಾರಣೆಗೊಳಪಡಿಸಲಾಗಿದ್ದು, ಎಫ್‌ಐಆರ್ ದಾಖಲಿಸಲಾಗಿದೆ’’ ಎಂದು ಚೋಟನಾಗ್ಪುರದ ಡೆಪ್ಯೂಟಿ ಇನ್ಸ್‌ಪೆಕ್ಟರ್ ಎ.ವಿ.ಹೋಮ್ಕರ್ ಹೇಳಿದ್ದಾರೆ.

ಜಾರ್ಖಂಡ್ ಗುಂಪುಹತ್ಯೆ ಮತ್ತು ಗುಂಪು ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಗಿದ್ದು, ಸೆಪ್ಟೆಂಬರ್‌ನಲ್ಲಿ ಇಂತಹ ಕನಿಷ್ಠ ಮೂರು ಪ್ರಕರಣಗಳು ದಾಖಲಾಗಿದೆ. ಕಳೆದ ಮೂರು ವರ್ಷಗಳಲ್ಲಿ, ರಾಜ್ಯದಲ್ಲಿ ಗುಂಪುಹತ್ಯೆಯಿಂದ 21 ಮಂದಿ ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here