ಜಾಗತಿಕ ಕಾರ್ಯಪಡೆ ಸ್ಟೀರಿಂಗ್‌ ಕಮಿಟಿಗೆ ಸುಂದರ್ ಪಿಚೈ ಸೇರಿ ಮೂವರು ಭಾರತೀಯ ಅಮೆರಿಕನ್‌ ಸಿಇಓಗಳು

Prasthutha|

ವಾಷಿಂಗ್ಟನ್: ಜಾಗತಿಕ ಕಾರ್ಯಪಡೆ ಸ್ಟೀರಿಂಗ್‌ ಕಮಿಟಿಗೆ ಸುಂದರ್ ಪಿಚೈ ಸೇರಿ ಮೂವರು ಭಾರತೀಯ ಅಮೆರಿಕನ್‌ ಸಿಇಓಗಳು ಸೇರ್ಪಡೆಗೊಂಡಿದ್ದಾರೆ.
ಕೋವಿಡ್ ನಿಂದ ಇಡೀ ದೇಶವೇ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಭಾರತಕ್ಕೆ ಅಮೆರಿಕಾ ನೆರವು ನೀಡಲು ಮುಂದಾಗಿದ್ದು, ಅಲ್ಲಿನ ಭಾರತೀಯ ಅಮೆರಿಕನ್ನರು ಕೂಡಾ ಸಾಧ್ಯವಾದಷ್ಟು ಸಹಾಯಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಅಮೆರಿಕಾದ 40ಕ್ಕೂ ಹೆಚ್ಚು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಕಾರ್ಯಪಡೆಯೊಂದನ್ನು ರಚಿಸಿ ಕೊರೋನಾ ಬಿಕ್ಕಟ್ಟಿನಲ್ಲಿರುವ ಭಾರತಕ್ಕೆ ನೆರವಾಗಲು ಮುಂದಾಗಿದ್ದು, ಇದಕ್ಕಾಗಿ ಈ ಜಾಗತಿಕ ಕಾರ್ಯಪಡೆ ಸ್ಟೀರಿಂಗ್ ಕಮಿಟಿಯನ್ನು ರಚಿಸಿದೆ.

- Advertisement -

ಅಮೆರಿಕಾದಲ್ಲಿರುವ ಕಾರ್ಪೊರೇಟ್ ಸಂಸ್ಥೆಗಳು ಭಾರತಕ್ಕೆ ನೀಡುವ ನೆರವನ್ನು ಈ ಸಮಿತಿ ಪರಿಶೀಲಿಸಲಿದ್ದು, ಈ ಸ್ಟೀರಿಂಗ್‌ ಸಮಿತಿಗೆ ಮೂವರು ಭಾರತೀಯ-ಅಮೆರಿಕನ್ ಸಿಇಓಗಳು ಸೇರ್ಪಡೆಗೊಂಡಿದ್ದಾರೆ.
ಗೂಗಲ್ ಸಿಇಓ ಸುಂದರ್ ಪಿಚೈ, ಡೆಲಾಯ್ಟ್ ಸಿಇಓ ಪುನೀತ್ ರೆಂಜನ್‌ ಹಾಗೂ ಅಡೋಬ್ ಸಿಇಓ ಶಾಂತನು ನಾರಾಯಣ್ ಸಮಿತಿಯಲ್ಲಿದ್ದಾರೆ.

Join Whatsapp