ಜಮ್ಮು-ಕಾಶ್ಮೀರ ಡಿ.ಡಿ.ಸಿ ಚುನಾವಣೆ: ಗುಪ್ಕರ್ ಮೈತ್ರಿಗೆ ಗೆಲುವು

Prasthutha|

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಸಭೆ (ಡಿ.ಡಿ.ಸಿ) ಗೆ ನಡೆದ ಚುನಾವಣೆಗಳಲ್ಲಿ ಪೀಪಲ್ಸ್ ಅಲೈನ್ಸ್ ಫಾರ್ ಗುಪ್ಕರ್ ಡಿಕ್ಲೇರೇಶನ್ (ಪಿ.ಎ.ಜಿ.ಡಿ) 110 ಸೀಟುಗಳನ್ನುಗೆದ್ದುಕೊಂಡಿದೆ.

ಜಮ್ಮು-ಕಾಶ್ಮೀರದ 20 ಜಿಲ್ಲೆಗಳಲ್ಲಿ 280 ಸೀಟುಗಳಿಗೆ ಚುನಾವಣೆ ನಡೆದಿತ್ತು. ಅವುಗಳಲ್ಲಿ 278 ಸೀಟುಗಳ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದೆ. ಇಬ್ಬರು ಅಭ್ಯರ್ಥಿಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದವರಾಗಿರುವುದರಿಂದ 2 ಸ್ಥಾನಗಳ ಮತಎಣಿಕೆ ಇನ್ನಷ್ಟೇ ನಡೆಯಬೇಕಿದೆ.

- Advertisement -

370ನೆ ವಿಧಿಯನ್ನು ಮರುಸ್ಥಾಪಿಸುವುದಕ್ಕಾಗಿ ಹೋರಾಡುತ್ತಿರುವ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಮೈತ್ರಿ ಪಿ.ಎ.ಜಿ.ಡಿ 278 ಸೀಟುಗಳಲ್ಲಿ ಸ್ಪರ್ಧಿಸಿದ್ದು, 110 ಸ್ಥಾನಗಳನ್ನು ಗೆದ್ದುಕೊಂಡಿದೆ. 75 ಸ್ಥಾನಗಳಲ್ಲಿ ಗೆದ್ದುಕೊಂಡಿರುವ ಬಿಜೆಪಿ ಅತ್ಯಂತ ದೊಡ್ದ ಪಕ್ಷವಾಗಿ ಹೊರಹೊಮ್ಮಿದೆ.

- Advertisement -