ಜಮಾಲ್‌ ಖಶೋಗಿ ಹತ್ಯೆಗೆ ಒಪ್ಪಿಗೆ ನೀಡಿದ್ದ ಸೌದಿ ರಾಜಕುಮಾರ: ವರದಿ

Prasthutha: February 27, 2021

ವಾಷಿಂಗ್ಟನ್‌: ವಾಷಿಂಗ್ಟನ್‌ ಪೋಸ್ಟ್ನ ಅಂಕಣಕಾರ ಜಮಾಲ್‌ ಖಶೋಗಿಯನ್ನು ಹತ್ಯೆ ಮಾಡಲು ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಒಪ್ಪಿಗೆ ನೀಡಿದ್ದರು ಎಂದು ಅಮೆರಿಕದ ಗುಪ್ತಚರ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.

ನ್ಯಾಷನಲ್‌ ಇಂಟೆಲಿಜೆನ್ಸ್‌ ನಿರ್ದೇಶಕರ ಕಚೇರಿ (ಒಡಿಎನ್‌ಐ) ಈ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸಂಸತ್‌ಗೆ ಸಲ್ಲಿಸಿದೆ.

ಸೌದಿ ರಾಜಕುಮಾರನ ನೀತಿಗಳನ್ನು ತಮ್ಮ ಅಂಕಣದಲ್ಲಿ ಟೀಕಿಸುತ್ತಿದ್ದ ಖಶೋಗಿ ಅವರನ್ನು ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯಾದ ಕಾನ್ಸುಲೇಟ್‌ನಲ್ಲಿ 2018ರ ಅಕ್ಟೋಬರ್‌ 2ರಂದು ಹತ್ಯೆ ಮಾಡಲಾಗಿತ್ತು.

‘ಖಶೋಗಿಯನ್ನು ಹತ್ಯೆ ಮಾಡುವಲ್ಲಿ ವಿಫಲರಾದರೆ ರಾಜಕುಮಾರ ತಮ್ಮನ್ನು ಹತ್ಯೆ ಮಾಡಬಹುದು ಎಂಬ ಆತಂಕ ಹತ್ಯೆಕೋರರಲ್ಲಿ ಮನೆ ಮಾಡಿತ್ತು. ಇಂಥ ಭೀತಿಯ ವಾತಾವರಣವನ್ನು ರಾಜಕುಮಾರ ಸೃಷ್ಟಿಸಿದ್ದ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ರಾಜಕುಮಾರನ ಅನುಮತಿ ಇಲ್ಲದೆಯೇ ಇಂಥ ಕೃತ್ಯಕ್ಕೆ ಕೈಹಾಕಲು ಸಾಧ್ಯವೇ ಇಲ್ಲ. ಈ ಬಗ್ಗೆ ರಾಜಕುಮಾರನ ಆದೇಶವನ್ನು ಪ್ರಶ್ನಿಸುವ ಧೈರ್ಯವೂ ಹತ್ಯೆಕೋರರಲ್ಲಿ ಇರಲಿಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಖಶೋಗಿ ಹತ್ಯೆ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಂಡುಬಂದ ಟೀಕೆಗಳನ್ನು ಹತ್ತಿಕ್ಕಲು ಕೆಲವರು ಪ್ರಯತ್ನಿಸಿದ್ದಾರೆ. ಇಂಥ ಕೃತ್ಯದಲ್ಲಿ ತೊಡಗಿದ್ದ ಆರೋಪದ ಮೇಲೆ ಸೌದಿ ಅರೇಬಿಯಾದ 76 ಜನರ ವೀಸಾದ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕೆನ್‌ ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!