ಚಾನೆಲ್ ವೀಕ್ಷಿಸಿದ್ದಕ್ಕಾಗಿ ಹಣ ದೊರಕುತ್ತಿತ್ತು: ರೇಟಿಂಗ್ ದಂಧೆಯ ಸಾಕ್ಷಿ ಹೇಳಿಕೆ

Prasthutha|

ಮುಂಬೈ: ಕೆಲವು ನಿಶ್ಚಿತ ಚಾನೆಲ್ ಗಳನ್ನು ವೀಕ್ಷಿಸಿದ್ದಕ್ಕಾಗಿ ತನಗೆ ಮಾಸಿಕ ಹಣ ಪಾವತಿಯಾಗುತ್ತಿತ್ತು ಎಂದು ಮನೆಯಲ್ಲಿ ‘ಪೀಪಲ್ ಮೀಟರ್’ ಹೊಂದಿದ್ದ  ವ್ಯಕ್ತಿಯೊಬ್ಬ ಒಪ್ಪಿಕೊಂಡಿದ್ದಾನೆ.  

ರಿಪಬ್ಲಿಕ್ ಟಿವಿ ಮತ್ತು ಇತರ ಎರಡು ಚಾನೆಲ್ ಗಳು ರೇಟಿಂಗ್ ನಕಲಿ ಸೃಷ್ಟಿಸುತ್ತಿರುವುದರ ವಿರುದ್ಧ ಮುಂಬೈ ಪೊಲೀಸ್ ತನಿಖೆ ಆರಂಭಿಸಿರುವಂತೆ ವ್ಯಕ್ತಿ ಇದನ್ನು ಬಹಿರಂಗಪಡಿಸಿದ್ದಾನೆ.

- Advertisement -

ಚಾನೆಲ್ ಗಳಿಂದ ಲಂಚ ಪಡೆದ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿರುವ ಈ ವ್ಯಕ್ತಿ, ತನ್ನ ಮನೆಯಲ್ಲಿ ಸ್ಥಾಪಿಸಲಾದ ಮೀಟರ್ ತನ್ನ ಬಿಲ್ ಗಳನ್ನು ಮತ್ತು ಡಿಟಿಎಚ್ ವ್ಯವಸ್ಥೆಯನ್ನು ಸ್ವಯಂ ಪಾವತಿ ಮಾಡುತ್ತಿತ್ತು ಎಂದು ಹೇಳಿದ್ದಾನೆ.

ಬಾರೊ ಮೀಟರ್ ನ ಪ್ರತಿನಿಧಿಯೊಬ್ಬರು ತನಗೆ ಬಾಕ್ಸ್ ಸಿನೆಮಾ (ತನಿಖೆ ಎದುರಿಸುತ್ತಿರುವ ಮೂರು ಚಾನೆಲ್ ಗಳಲ್ಲೊಂದು) ಚಾನೆಲ್ ವೀಕ್ಷಿಸುವಂತೆ ಹೇಳಿದ್ದರು. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯ ತನಕ ಚಾನೆಲ್ ವೀಕ್ಷಿಸಬೇಕಿತ್ತು. ಅದಕ್ಕಾಗಿ ನನಗೆ 500 ರೂಪಾಯಿ ಪಾವತಿಸಲಾಗುತ್ತಿತ್ತು”      ಎಂದು ಆತ ಹೇಳಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕ್ಸ್ ಚಾನೆಲ್ ಮತ್ತು ಫಕ್ತ್ ಮರಾಠಿಯ ಮಾಲೀಕರನ್ನೊಳಗೊಂಡಂತೆ ನಾಲ್ವರನ್ನು ಬಂಧಿಸಲಾಗಿದೆ.

ರಿಪಬ್ಲಿಕ್ ಟಿವಿಯ ನಿರ್ದೇಶಕರು ಮತ್ತು ಪ್ರಚಾರಕರನ್ನು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸ್ ಪರಮ್ ಬೀರ್ ಸಿಂಗ್ ಹೇಳಿದ್ದಾರೆ.

ರೇಟಿಂಗ್ ಅಳೆಯುವುದಕ್ಕಾಗಿ ಟಿ.ವಿ ಸೆಟ್ ಗಳಿಗೆ “ಪೀಪಲ್ ಮೀಟರ್” ಅಂಟಿಸಲಾಗುತ್ತದೆ. ವಿವಿಧ ಚಾನೆಲ್ ಗಳ ವೀಕ್ಷಕ ವಿವರಣೆ ಪರಿಶೀಲಿಸುವುದಕ್ಕಾಗಿ ಮುಂಬೈಯಲ್ಲಿ 2000 ಮನೆಗಳಿಗೆ ಈ ಮೀಟರ್ ಗಳನ್ನು ಅಳವಡಿಸಲಾಗಿದೆ.

ಈ ಮೀಟರ್ ಗಳಿಂದ ಪಡೆದ ಮಾಹಿತಿ ರಹಸ್ಯವಾಗಿರಬೇಕು. ಈ ಮೀಟರ್ ಗಳನ್ನು ಅಳವಡಿಸುವ ಜವಾಬ್ದಾರಿಯನ್ನು ಬಾರ್ಕ್ (ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ಖಾಸಗಿ ಸಂಸ್ಥೆ ಹಸ್ನಾಗೆ ನೀಡಿತ್ತು.

ಟಿವಿ ರೇಟಿಂಗ್ ನಲ್ಲಿ ವಂಚನೆ ನಡೆಯುತ್ತಿರುವ ಕುರಿತು ಹಸ್ನಾ ದೂರು ನೀಡಿತ್ತು. ಚಾನೆಲ್ ಗಳನ್ನು ಚಾಲನೆಯಲ್ಲಿಡುವುದಕ್ಕಾಗಿ ಲಂಚ ನೀಡಿರುವ ಮಾಧ್ಯಮ ಕಂಪೆನಿಗಳಿಗೆ ಡಾಟ ಹಂಚಿಕೆಯಾಗಿರುವುದು ಪತ್ತೆಯಾಗಿದೆ. ಅಲ್ಲದೆ ತಮ್ಮ ರೇಟಿಂಗ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಚಾನೆಲ್ ಗಳು ಹಲವು ಮನೆಗಳಿಗೆ ಲಂಚ ನೀಡಿರುವುದರ ಕುರಿತು ಸಾಕ್ಷ್ಯವನ್ನೂ ಹನ್ಸಾ ಹಂಚಿಕೊಂಡಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಆರೋಪವನ್ನು ರಿಪಬ್ಲಿಕ್ ಟಿವಿ ನಿರಾಕರಿಸಿದೆ. ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರನ್ನು ಟೀಕಿಸಿದ್ದಕ್ಕಾಗಿ ದ್ವೇಷ ಸಾಧಿಸಲಾಗುತ್ತಿದೆ ಎಂದು ರಿಪಬ್ಲಿಕ್ ಟಿವಿ ಹೇಳಿದೆ.

“ಸ್ವತಂತ್ರ ಸಂಸ್ಥೆ ಹನ್ಸಾ ದೂರು ನೀಡಿತ್ತೇ ಹೊರತು ನಾವಲ್ಲ. ಅನುಮಾನಾಸ್ಪದ ವಿಚಾರಗಳನ್ನು ಅವರು ಗಮನಿಸಿದ್ದರೆ ಹೊರತು ನಾವಲ್ಲ. ಕೆಲವು ಚಾನೆಲ್ ಗಳ ಅನುಮಾನಾಸ್ಪದ ರೇಟಿಂಗ್ ಶೈಲಿಯನ್ನು ಗಮನಿಸಿದ್ದರು. ಅವರು ಈ ಕುರಿತು ನಮ್ಮೊಂದಿಗೆ ಹಂಚಿಕೊಂಡರು” ಎಂದು ಅವರು ಹೇಳಿದ್ದಾರೆ.

- Advertisement -