ಚರಕದ ಕುರಿತ ಮಹಾತ್ಮಾ ಗಾಂಧಿಯ ಪತ್ರ 4.5 ಲಕ್ಷ ರೂ.ಗೆ ಹರಾಜು

0
392

ಬೋಸ್ಟನ್: ನೂಲು ತೆಗೆಯುವ ಚರಕದ ಮಹತ್ವದ ಕುರಿತು ಮಹಾತ್ಮಾ ಗಾಂಧೀಜಿಯವರು ಬರೆದಿದ್ದ ದಿನಾಂಕವಿಲ್ಲದ ಪತ್ರವೊಂದು 6,358 ಡಾಲರ್(4.5 ಲಕ್ಷ) ಗೆ ಹರಾಜಾಗಿದೆ ಎಂದು ಅಮೆರಿಕನ್ ಮೂಲದ ಹರಾಜು ಕಂಪೆನಿ ಹೇಳಿದೆ.

ಗುಜರಾತಿ ಭಾಷೆಯಲ್ಲಿರುವ ಆ ಪತ್ರವನ್ನು ಯಶವಂತ್ ಪ್ರಸಾದ್ ಎಂಬ ಹೆಸರಿಗೆ ಬಾಪು ಆಶೀರ್ವಾದ ಎಂಬ ಸಹಿಯೊಂದಿಗೆ ಬರೆಯಲಾಗಿದೆ. ಹರಾಜಿನಲ್ಲಿ ವಿಜೇತನಾದ ವ್ಯಕ್ತಿ ತನ್ನ ಹೆಸರನ್ನು ಬಹಿರಂಗಪಡಿಸಲಿಲ್ಲ ಎಂದು ಹರಾಜು ಕಂಪೆನಿ ಹೇಳಿದೆ.

 

 

LEAVE A REPLY

Please enter your comment!
Please enter your name here