ಗ್ಯಾಸ್ ಗೀಝರ್ ಸೋರಿಕೆ; ಯುವಕ ಸಾವು

Prasthutha: July 13, 2021

ಬಂಟ್ವಾಳ: ಸ್ನಾನದ ಕೋಣೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಝರ್ ಸೋರಿಕೆಯಾಗಿ ಯುವಕನೋರ್ವ ಉಸಿರು ಗಟ್ಟಿ ಮೃತಪಟ್ಟ ಘಟನೆ ಫರಂಗಿಪೇಟೆಯ ಮಾರಿಪಳ್ಳ ದಲ್ಲಿ ನಡೆದಿದೆ.
ಇಲ್ಲಿನ ಇಸ್ಮಾಯಿಲ್ ಎಂಬವರ ಪುತ್ರ ಇಜಾಝ್ ಅಹ್ಮದ್ (23) ಮೃತಪಟ್ಟ ಯುವಕ. ಈತ ಸ್ನಾನದ ಕೊನೆಯಲ್ಲಿ ಗೀಝರ್ ಆನ್ ಮಾಡಿ ಸ್ನಾನ ಮಾಡುತ್ತಿರುವ ವೇಳೆ ಈ ಘಟನೆ ನಡೆದಿದೆ.


ಸ್ನಾನಕ್ಕೆ ತೆರಳಿದ ಯುವಕ ಒಂದು ಗಂಟೆಯಾದರೂ ಹೊರ ಬರದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಆತನ ತಂದೆ ಮತ್ತು ಸಹೋದರರು ಬಾಗಿಲು ಒಡೆದು ನೋಡಿದಾಗ ಆತ ಕೊಠಡಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ. ಬಳಿಕ ಆತನನ್ನು ತಂಬೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆ ಯುವಕ ಮೃತಪಟ್ಟಿದ್ದ. ಗ್ಯಾಸ್ ಗೀಝರ್ ನಿಂದ ಹೊರ ಬರುವ ಕಾಬರ್ನ್ ಮಾನಾಕ್ಸೈಡ್ ಸೇವಿಸಿ ಸಾವು ಸಂಭವಿಸಿದೆ ಎನ್ನಲಾಗಿದೆ. ಹುಬ್ಬಳ್ಳಿಯ ಜುವೆಲ್ಲರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಜಾಝ್ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದ ಎನ್ನಲಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ